www.karnatakatv.net: ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ಕೈತಪ್ಪಿದ್ದಕ್ಕೆ ಟಿಕೆಟ್ ವಂಚಿತನೊಬ್ಬ ಅಭ್ಯರ್ಥಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರೋ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಚುನಾವಣಾ ಕಣಾ ರಂಗೇರತೊಡಗಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 35ರ ಬಿಜೆಪಿ ಟಿಕೆಟ್ ಈ ಬಾರಿ ಬಂಜಾರಾ ಸಮುದಾಯದ ಅಭ್ಯರ್ಥಿ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ವಾರ್ಡ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ದತ್ತಾ ಬಿಲಾವರ್ ಎಂಬಾತ ಬಂಜಾರಾ ಸಮಾಜವನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಶಾಸಕ ಅನಿಲ ಬೆನಕೆ ಅವರ ಮುಂದೆಯೇ ಈ ಘಟನೆ ನಡೆದಿದ್ದು, ಇಂತಹ ಘಟನೆಗಳು ಮರುಕಳಿಸಿದ್ರೆ ಸಮಾಜದ ಸ್ವಾಸ್ತ್ಯ ಹಾಳಾಗುತ್ತೆ. ಕೇವಲ ರಾಜಕೀಯ ಲಾಭ ಮತ್ತು ವೈಯಕ್ತಿಕ ಲಾಭಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಬಂಜಾರಾ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ರು. ಇಲ್ಲದಿದ್ದರೆ ಚುನಾವಣೆ ಬಳಿಕ ಬೃಹತ್ ಹೋರಾಟ ನಡೆಸಲಾಗುವುದು ಅಂತ ಇದೇ ವೇಳೆ ಸಮುದಾಯದ ಮುಖಂಡರು ಆಗ್ರಹಿಸಿದ್ರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ

