Sunday, September 8, 2024

Latest Posts

ಮ್ಯಾಕ್ಸಿಕನ್ ಸಲಾಡ್ ರೆಸಿಪಿ..

- Advertisement -

ಈಗಾಗಲೇ ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಎಂದು ಹೇಳಿದ್ದೇವೆ. ಇಂದು ನಾವು ಮ್‌ಯಾಕ್ಸಿಕನ್ ಸಲಾಡ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಟೇಸ್ಟಿ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ ಏನು..? ಇದನ್ನ ಮಾಡುವುದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ- ಲೆಟ್ಟಸ್ ಸೊಪ್ಪು,ಟೊಮೆಟೋ, ಬೇಯಿಸಿದ ಅಮೇರಿಕನ್ ಕಾರ್ನ್,  ಬೇಯಿಸಿದ ಕಿಡ್ನಿ ಬೀನ್ಸ್, ಬಟರ್ ಫ್ರೂಟ್, ಸ್ಪ್ರಿಂಗ್ ಆನಿಯನ್ಸ್. ಇವಿಷ್ಟು ಸಲಾಡ್‌ಗೆ ಬೇಕಾದ ತರಕಾರಿ, ಹಣ್ಣುಗಳು.

ಇನ್ನು ಡ್ರೆಸ್ಸಿಂಗ್‌ಗಾಗಿ ಎರಡು ಟೇಬಲ್ ಸ್ಪೂನ್ ಆಲಿವ್ ಎಣ್ಣೆ, ಒಂದು ನಿಂಬೆಹಣ್ಣು, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಎರಡರಿಂದ ಮೂರು ಬೆಳ್ಳುಳ್ಳಿ ಎಸಳು, ಎರಡು ಸ್ಪೂನ್ ಆರ್ಗ್ಯಾನೋ, ಎರಡು ಸ್ಪೂನ್ ಜೀರಿಗೆ ಪುಡಿ, ಚಿಟಿಕೆ ಚಿಲ್ಲಿ ಫ್ಲೇಕ್ಸ್, ರುಚಿಗೆ ತಕ್ಕಷ್ಟು ಉಪ್ಪು.

ಮೊದಲನೇಯದಾಗಿ ಡ್ರೆಸ್ಸಿಂಗ್‌ ರೆಡಿ ಮಾಡಬೇಕು. ಆಲಿವ್ ಎಣ್ಣೆ, ಎರಡು ಸ್ಪೂನ್ ನಿಂಬೆ ರಸ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಸಣ್ಣಗೆ ಹೆಚ್ಚಿನ ಬೆಳ್ಳುಳ್ಳಿ ಎಸಳು, ಆರ್ಗ್ಯಾನೋ, ಜೀರಿಗೆ ಪುಡಿ, ಚಿಲ್ಲಿ ಫ್ಲೇಕ್ಸ್ ಮತ್ತು ಉಪ್ಪು ಸೇರಿಸಿ, ಮಿಕ್ಸ್ ಮಾಡಿ ಚಿಕ್ಕ ಬೌಲ್‌ನಲ್ಲಿ ಹಾಕಿಡಿ. ಈಗ ಡ್ರೆಸ್ಸಿಂಗ್ ರೆಡಿ.

ಈಗ ಸಲಾಡ್‌ಗಾಗಿ ತರಕಾರಿಯನ್ನ ಕತ್ತರಿಸಿ. ಲೆಟ್ಟಸ್ ಸೊಪ್ಪು, ಟೊಮೆಟೋ, ಬೆಣ್ಣೆ ಹಣ್ಣು, ಸ್ಪ್ರಿಂಗ್ ಆನಿಯನ್ಸ್, ಇವನ್ನೆಲ್ಲ ಚಿಕ್ಕದಾಗಿ ಕತ್ತರಿಸಿ ಬೌಲ್‌ಗೆ ಹಾಕಿ. ಇದಕ್ಕೆ ಬೇಯಿಸಿದ ಅಮೆರಿಕನ್ ಕಾರ್ನ್, ಬೇಯಿಸಿದ ಕಿಡ್ನಿ ಬೀನ್ಸ್, ಇವನ್ನೆಲ್ಲ ಸೇರಿಸಿ, ಇದಕ್ಕೆ ಡ್ರೆಸ್ಸಿಂಗ್ ಮಿಕ್ಸ್ ಮಾಡಿದ್ರೆ ಮೆಕ್ಸಿಕನ್ ಸಲಾಡ್ ರೆಡಿ.

- Advertisement -

Latest Posts

Don't Miss