Friday, October 18, 2024

Latest Posts

ವಲಸೆ ಪಕ್ಷಿಗಳ ಕಲರವ

- Advertisement -

ರಾಯಚೂರಿನ ಎಗನೂರು ಕೆರೆಯಲ್ಲಿ ಬಾನಾಡಿಗಳ ಲೋಕ..
ವಲಸೆ ಪಕ್ಷಿಗಳ ಸಾಮ್ರಾಜ್ಯ ನೋಡುಗರ ಕಣ್ಣಿಗೆ ಹಬ್ಬ.

ರಾಯಚೂರು ತಾಲ್ಲೂಕಿನ ಯರಮರಸ್ ದಂಡ್ ಸಮೀಪದ ಏಗನೂರು ಅನ್ನೋ ಕೆರೆ ತೀರದ ಗ್ರಾಮದಲ್ಲಿ ಬಾನಾಡಿಗಳ ಲೋಕ ಸೃಷ್ಟಿಯಾಗಿದೆ.
ಇಲ್ಲಿ ಪ್ರತೀ ವರ್ಷ ಚಳಿಗಾಲ ಮತ್ತು ಮಳೆಗಾಲದಲ್ಲಿ ಮಂಗೋಲಿಯಾ, ಟಿಬೆಟ್, ಉತ್ತರ ಚೈನಾ, ರಷ್ಯಾ ಸೇರಿದಂತೆ ಅನೇಕ ಭಾಗದ ಹಕ್ಕಿಗಳ ಲಗ್ಗೆ..
ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುವ ಈ ಪಕ್ಷಿಗಳು, ಐದಾರು ತಿಂಗಳು ಇಲ್ಲಿಯೇ‌ ನೆಲೆಸಿ ಬಳಿಕ ತಮ್ಮ ತಾಯ್ನಾಡಿಗೆ ತೆರಳುತ್ತವೆ.
ಪಟ್ಟಿ ಹೆಬ್ಬಾತು, ಕಾಮನ್ ಕ್ರೇನ್, ಸ್ಪಾಟ್ ಬಿಲ್ಡ್ ಡಕ್ ಸೇರಿದಂತೆ ನಾನಾ ರೀತಿಯ ಪಕ್ಷಿಗಳು ಏಗನೂರು ಕೆರೆಗೆ ಆಗಮಿಸಿವೆ.
ಈ ಪಕ್ಷಿಗಳು ೨೫ ರಿಂದ ೨೭ ಸಾವಿರ ಅಡಿ ಮೇಲೆ ಹಾರುತ್ತವೆ.
ಈ ವಿದೇಶಿ ಪಕ್ಷಿಗಳನ್ನು ನೋಡಲು ಪಕ್ಷಿ ಪ್ರೇಮಿಗಳು ಇಲ್ಲಿಗೆ ಆಗಮಿಸುತ್ತಾರೆ.

- Advertisement -

Latest Posts

Don't Miss