Thursday, May 16, 2024

Latest Posts

Milk : ಕಾಲುವೆಗೆ ಹಾಲು ಸುರಿದು ಪ್ರತಿಭಟನೆ ಮಾಡಿದ ರೈತರು..!

- Advertisement -

ಪಿರಿಯಾಪಟ್ಟಣ: ತಾಲ್ಲೂಕಿನ ಚಿಟ್ಟೇನಹಳ್ಳಿ ಡೇರಿಯಲ್ಲಿ ಹಾಲು ಖರೀದಿ ವಿಷಯದಲ್ಲಿ ಎರಡು ಬಣಗಳ ನಡುವೆ ಪ್ರತಿಷ್ಠೆಯಿಂದಾಗಿ ಕಾಲುವೆಗೆ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಬೆಳಗಿನ ಜಾವ ಹಾಲು ತೆಗೆದುಕೊಂಡು ರಸ್ತೆ ದಾಟುವಾಗ ಅಪಘಾತ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಳೆಯ ಕಟ್ಟಡದಲ್ಲಿಯೇ ಹಾಲು ಹಾಕುತ್ತಾ ಬಂದಿದ್ದೇವೆ. ಆದರೆ ಇದೀಗ ಹಾಲು ಅಳೆಯಲು ಇಲ್ಲಿ ಅವಕಾಶ ನೀಡದೆ, ಬಿಎಂಸಿ ಕೇಂದ್ರದಲ್ಲಿಯೇ ಹಾಕಬೇಕು ಎಂದು ಸಚಿವ ಕೆ.ವೆಂಕಟೇಶ್ ಹಾಗೂ ಹಾಲು ಒಕ್ಕೂಟದ ವ್ಯವಸ್ಥಾಪಕರು ಒತ್ತಡ ಹೇರಿದ್ದು, ಏಕಾಏಕಿ ಹಾಲಿನ ಕೇಂದ್ರ ಮುಚ್ಚಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ’ ಎಂದು ಆರೋಪಿದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ ಮಾತನಾಡಿ, ‘ಗ್ರಾಮಸ್ಥರ ಅನುಕೂಲಕ್ಕಾಗಿ ಎರಡು ಕೇಂದ್ರಗಳನ್ನು ತೆರೆದು ಹಾಲು ಖರೀದಿ ಮಾಡುತ್ತಿದರು. ಈ ಬಗ್ಗೆ ಕಳೆದ ಎರಡು ವರ್ಷದಿಂದಲೂ ಹಾಲು ಉತ್ಪಾದಕರ ಅನುಕೂಲಕ್ಕಾಗಿ ಎಲ್ಲರ ಒಪ್ಪಿಗೆ ಪಡೆದು ಊರಿನ ಎರಡು ಕೇಂದ್ರದಲ್ಲೂ ನಿಗದಿತ ವೇಳೆಯಲ್ಲಿ ಹಾಲು ತೆಗೆದುಕೊಳ್ಳುತ್ತಿದರು. ಇದರಿಂದ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಆದರೆ ಸಚಿವರು, ರಾಜಕೀಯ ದ್ವೇಷಕ್ಕಾಗಿ ಈ ರೀತಿ ಮಾಡಿಸುತ್ತಿದಾರೆ’ ಎಂದು ದೂರಿದರು.

‘ಬಿಎಂಸಿ ಕೇಂದ್ರವು ಊರಿನ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ. ಇದರಿಂದಾಗಿ ಸಂಜೆ ಸಮಯದಲ್ಲಿ ವೃದ್ಧರು, ಮಕ್ಕಳು ಹಾಲು ತೆಗೆದುಕೊಂಡು ಹೋಗುವ ವೇಳೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದವು. ಹಲವು ಸಂದರ್ಭದಲ್ಲಿ ಅಪಘಾತ ನಡೆದ ವೇಳೆ ಪ್ರಾಣಪಾಯದಿಂದ ಉಳಿದಕೊಂಡ ಉದಾರಣೆಗಳಿವೆ. ಆದ್ದರಿಂದ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರು ಸೇರಿ ಎರಡು ಕಡೆಗಳಲ್ಲಿ ಹಾಲು ತೆಗೆದುಕೊಳ್ಳುವ ತೀರ್ಮಾನಮಾಡಲಾಗಿತ್ತು. ಆದರೆ ಈಗ ಏಕಾಏಕಿ ಈ ನಿರ್ಧಾರದಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗುವ ಪರಿಸ್ಥಿತಿ ಸೃಷ್ಟಿಸಲಾಗಿದೆ. ಸಂಬಂಧಪಟ್ಟ ಅಧಿಕಾರಗಳು ಸೂಕ್ತ ತೀರ್ಮಾನ ಕೈಗೊಳ್ಳುಬೇಕು’ ಎಂದರು.

ವರದಿ. ಪರಮೇಶ್ ಪಿರಿಯಾಪಟ್ಟಣ.

Sanathana Dharma ಪ್ರಕಾಶ್ ರಾಜ್ ಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ; ಪ್ರಹ್ಲಾದ್ ಜೋಶಿ

Praladh Joshi: ಮುಸ್ಲಿಂ ಲೀಗ್ ದೇಶವನ್ನೇ ವಿಭಜನೆ ಮಾಡಿದೆ, ನರಮೇಧವಾಗಿದೆ..!

farmer and Bank: ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ:ನ್ಯಾಯಾಧೀಶ ಚಿನ್ನಣ್ಣ..!

- Advertisement -

Latest Posts

Don't Miss