Thursday, July 25, 2024

Latest Posts

Praladh Joshi: ಮುಸ್ಲಿಂ ಲೀಗ್ ದೇಶವನ್ನೇ ವಿಭಜನೆ ಮಾಡಿದೆ, ನರಮೇಧವಾಗಿದೆ..!

- Advertisement -

ಹುಬ್ಬಳ್ಳಿ: ಸನಾತನ ಧರ್ಮದ ವಿಚಾರ ಸದ್ಯ ರಾಷ್ಟ್ರದಲ್ಲೆಡೆ ಚರ್ಚೆಗೆ  ಕಾರಣವಾಗಿದ್ದು ಉದಯನಿಧಿ ಸ್ಟಾಲಿನ್ ಅವರು ಕೊಟ್ಟಿರುವ ಉದಯನಿಧಿ ಸ್ಟಾಲಿನ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗೆ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೆಂಡಕಾರಿದ್ದಾರೆ.

ಉದಯನಿಧಿಯವರು ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ಅಚಾನಕ್ಕಾಗಿ ಬಂದಿರುವ ಮಾತಲ್ಲ , ಸನಾತನ ಧರ್ಮದ ವಿರುದ್ದವಾಗಿಯೇ ಅಲ್ಲಿ ಮೊದಲೇ  ಕಾನ್ಫರೆನ್ಸ್  ಮಾಡಲಾಗಿತ್ತು, ಕಾಂಗ್ರೆಸ್ ಪಕ್ಷಕ್ಕೆ ಈ ವಿಚಾರ ಮೊದಲೇ ತಿಳಿದಿದ್ದರೂ ಅದನ್ನು ಖಂಡಿಸಿಲ್ಲ ಈ ಅವಹೇಳನಕಾರಿ ಮಾತನ್ನು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಆದರೆ ಇವರು ಎಲ್ಲಾ ಧರ್ಮವನ್ನು ನಂಬುತ್ತೇವೆ ಎಂದು ಹೇಳುತ್ತಾರೆ ಇದಕ್ಕೆ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕು.

ರಾಹುಲ್ ಗಾಂಧಿ ಅಮೇರಿಕಾಕ್ಕೆ ಹೋಗಿ ಮುಸ್ಲೀಮ್ ಲೀಗ್ ಸೆಕ್ಯುಲರ್ ಪಾರ್ಟಿ ಎಂದಿದ್ದರು. ಘಮಂಡಿ ಘಟಬಂಧನ ಉಳಿಸಿಕೊಳ್ಳವ ಆತುರದಲ್ಲಿ  ಈ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿಲ್ಲ ಆದರೆ ಮುಸ್ಲಿಂ ಲೀಗ್ ದೇಶವನ್ನೇ ವಿಭಜನೆ ಮಾಡಿದೆ ಮತ್ತು ನರಮೇಧವಾಗಿದೆ.

ಇನ್ನು ಇದೇ ವಿಚಾರವಾಗಿ ಡಿಕೆಶಿಯವರಿಗೆ ಜೋಶಿಯವರು ಪ್ರಶ್ನೆ ಮಾಡಿದ್ದಾರೆ.

ಡಿಕೆಶಿಯವರು ಉದಯನಿಧಿಯವರ ಹೇಳಿಕೆಯನ್ನು ಖಂಡಿಸಿಲ್ಲ ದೇಶದ ಸಂಸ್ಕೃತಿ ನಂಬಿಕೆ ಸಮಗ್ರತೆ ಏನಾದರೂ ಆಗಲಿ ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ತುಷ್ಠಿಕರಣ ಔನತ್ಯ ತಲುಪಿದೆ. ಇದರ ಬಗ್ಗೆ ಕಾಂಗ್ರೆಸ್ ಪಕ್ಷ  ನಿಲುವನ್ನು ಸ್ಪಷ್ಟಪಡಿಸಬೇಕೆಂದು ಅಗ್ರಹಿಸಿದರು.

farmer and Bank: ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ:ನ್ಯಾಯಾಧೀಶ ಚಿನ್ನಣ್ಣ..!

Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!

Auto: ಒಂದೇ ದಿನದಲ್ಲಿ ಆಟೋ ರಿಕ್ಷಾ ಕಳ್ಳರನ್ನು ಬಂಧಿಸಿದ ಪೊಲೀಸರು..!

- Advertisement -

Latest Posts

Don't Miss