Saturday, July 20, 2024

Latest Posts

Maluru :ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ಸ್ಥಾಪನೆ; ಕೆ.ವೈ ನಂಜೇಗೌಡ.

- Advertisement -

ಕೋಲಾರ: ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಅಧಿಕಾರಿಗಳು ಬದಲಾಗುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ಮಾಲೂರು ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳನ್ನು ಹಾಕಿ ಲೂಟಿ ಮಾಡಿದ್ದರು. ಬಿಜೆಪಿ ಸರ್ಕಾರ ಮತ್ತು ಸಂಸದರು ಯಾವುದೇ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬಿಡಲಿಲ್ಲ. ಈಗ ನಾವು ಅದೇ ಅಧಿಕಾರಿಗಳನ್ನು ಇಟ್ಟುಕೊಂಡು ಕೆಲಸ ಮಾಡಲು ಆಗುತ್ತದಾ? ಎಂದು ಕೋಲಾರದಲ್ಲಿ ಮಾಲೂರು ಕ್ಷೇತ್ರದ ಶಾಸಕ ಕೆ.ವೈ ನಂಜೇಗೌಡ ಪ್ರಶ್ನಿಸಿದರು.

ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಕೋಚಿಮುಲ್ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯ ನಡೆಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವೈ.ನಂಜೇಗೌಡ, ಬಿಜೆಪಿ ಸರ್ಕಾರ ಬಂದಾಗ ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡಿದ್ದರು. ನಾನೂ ಅಷ್ಟೇ.. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಿಗಳನ್ನು ಬದಲಾವಣೆ ಮಾಡುವುದು ಸಹಜ. ಸಂಸದರು ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಏನೇನು ತಂದಿದ್ದಾರೆ ಎಂದು ಚರ್ಚಿಸೋಣ, ಸಂಸದರು ಅಂಕಿ ಅಂಶಗಳನ್ನು ಕೊಡಲಿ ಎಂದು ಸಂಸದ ಮುನಿಸ್ವಾಮಿಗೆ ಶಾಸಕ ಕೆ.ವೈ ನಂಜೇಗೌಡ ಸವಾಲು ಹಾಕಿದರು.

ತಾಲೂಕಿನ ಹೊಳಲಿ ಬಳಿ ಸೋಲಾರ್ ಘಟಕ ಸ್ಥಾಪನೆ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಗಾ ಡೇರಿಯಾದಂತೆ ಕೋಲಾರದಲ್ಲಿ ಎಂವಿಕೆ ಗೋಲ್ಡನ್ ಡೇರಿ ಆರಂಭ ಆಗಬೇಕಿದ್ದರ ಕುರಿತು ಟೆಂಡರ್ ಹಂತದಲ್ಲಿದೆ. ಈಗಾಗಲೇ ಪ್ರತಿ ತಿಂಗಳು ಕೋಚಿಮುಲ್ ಒಕ್ಕೂಟವು 2 ಕೋಟಿ ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದು, ಕೋಲಾರ ತಾಲೂಕಿನ ಹೊಳಲಿ ಬಳಿ ಸೋಲಾರ್ ಘಟಕ ಸ್ಥಾಪಿಸಲಾಗುವುದು. 25 ವರ್ಷ ಅದರಿಂದ ಕೆಲಸ ಮಾಡಬಹುದಾಗಿದ್ದು, 2 ಕೋಟಿ ರೂ ವಿದ್ಯುತ್ ಬಿಲ್‌ ಅನ್ನು ಶೂನ್ಯ ಮಾಡಿಕೊಳ್ಳಬಹುದು ಎಂದರು.

ಚಿಂತಾಮಣಿಯಲ್ಲಿ 45 ಕೋಟಿ ರೂ ವೆಚ್ಚದಲ್ಲಿ ಐಸ್ ಕ್ರೀಂ ಘಟಕ ಸ್ಥಾಪನೆ:
ಹಾಗೇ ಚಿಂತಾಮಣಿಯಲ್ಲಿ ಐಸ್‌ಕ್ರೀಂ ಘಟಕವನ್ನು 45 ಕೋಟಿ ರೂ.ನಲ್ಲಿ ಮಾಡಲಾಗುವುದು. ಎರಡೂ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಸಾಮಾನ್ಯ ಸಭೆಯಲ್ಲಿಯೂ ಒಪ್ಪಿಗೆ ಸೂಚಿಸಿದ್ದಾರೆ.  ಹಾಲಿನ ದರವನ್ನು 2 ತಿಂಗಳಲ್ಲಿ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಒಕ್ಕೂಟ ವಿಭಜನೆಗೆ ಯಾರೂ ಅಡ್ಡಿಯಿಲ್ಲ. ಕ್ಷೇತ್ರ ವಿಂಗಡಣೆ ಈ ಹಿಂದೆಯೇ ಮಾಡಬೇಕಿದ್ದು, ತಡವಾಗಿದೆ ಕೂಡಲೇ ಮಾಡಲಾಗುವುದು ಎಂದರು.

Shetter Phone call : ರಾಜಕೀಯ ಗಮನವನ್ನು ಬೇರೆಡೆಗೆ ಸೆಳೆಯಲು ತಂತ್ರ

 

‘ನಿವೃತ್ತ ನ್ಯಾಯಮೂರ್ತಿಗಳ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು’

Super sisters: ಸಮಯಪ್ರಜ್ಞೆಯಿಂದ ತಮ್ಮನ ಪ್ರಾಣ ಉಳಿಸಿದ ಸಹೋದರಿಯರು..!

 

- Advertisement -

Latest Posts

Don't Miss