ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ರೂಪಿಸಿರುವ ‘ಮೈಂಡ್ ನೋಟ್’ ಆ್ಯಪ್ ಬಳಕೆ ಹೆಚ್ಚಳವಾಗಿದೆ. ಸ್ವಯಂ ಮೌಲ್ಯಮಾಪನದ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸಮಯಕ್ಕೆ ತಕ ಚಿಕಿತ್ಸೆಗೆ ಮುಂದಾಗುವಂತೆ ಪ್ರೇರೇಪಿಸುವ ಈ ಆ್ಯಪ್ ಕನ್ನಡದಲ್ಲಿಯೂ ಲಭ್ಯವಿರುವುದರಿಂದ ಜನಪ್ರಿಯವಾಗಿದೆ.
ನಿಮ್ಹಾನ್ಸ್ ಮೊದಲಿಗೆ ಪುಶ್-ಡಿ ಆ್ಯಪ್ ಮೂಲಕ ಖಿನ್ನತೆ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನ ಮಾಡಿತ್ತು. ಆದರೆ ಹೊಸ ಆ್ಯಪ್ ಭಿನ್ನವಾಗಿ, ಬಳಕೆದಾರರ ಮನೆಲ್ಲಿಯೇ ಸ್ವಯಂ-ಮೌಲ್ಯಮಾಪನ ನಡೆಸಿ, ಅವರಿಗೆ ತಕ್ಷಣದ ಮಾರ್ಗದರ್ಶನ ನೀಡುವಂತೆ ರೂಪಿಸಲಾಗಿದೆ. ಆತಂಕ, ಖಿನ್ನತೆ, ಒಂಟಿತನ ಮತ್ತು ನಿರಂತರ ಉದ್ವೇಗ ಸಮಸ್ಯೆಗಳನ್ನು ಎದುರಿಸುವವರಿಗೆ ಇದರ ಸಹಾಯ ಇದೆ.
‘ಮೈಂಡ್ ನೋಟ್’ ಆ್ಯಪ್ IIIT ಬೆಂಗಳೂರು ಮತ್ತು ಮೈಕ್ರೋಸಾಫ್ಟ್ ಇಂಡಿಯಾ ಸಹಯೋಗದಲ್ಲಿ ನಿಮ್ಹಾನ್ಸ್ ‘ಮೆಂಟಲ್ ಹೆಲ್ತ್ ಸಂತೆ’ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿತ್ತು. ಬಳಕೆ ಸಂಪೂರ್ಣ ಉಚಿತವಾಗಿದ್ದು, ಒಂದು ವರ್ಷದೊಳಗೆ 2.50 ಲಕ್ಷ ಡೌನ್‌ಲೋಡ್, 50 ಸಾವಿರ ಕನ್ನಡಿಗರು ಕ್ರಿಯಾಶೀಲ ಬಳಕೆದಾರರಾಗಿ ನೋಂದಾಯಿಸಿದ್ದಾರೆ. ಇದರಲ್ಲಿ 18 ರಿಂದ 35 ವರ್ಷ ವಯಸ್ಸಿನ ಯುವಕರು ಹೆಚ್ಚು ಬಳಕೆ ಮಾಡಿದ್ದಾರೆ ಎಂದು ನಿಮ್ಹಾನ್ಸ್ ತಿಳಿಸಿದೆ.
ಆ್ಯಪ್, ಬಳಕೆದಾರರ ಆತಂಕ ಮತ್ತು ಖಿನ್ನತೆಯ ಸಮಸ್ಯೆಗಳನ್ನು ಗುರುತಿಸಲು, ಪ್ರಮಾಣೀಕೃತ ಸ್ವಯಂ-ಶ್ರೇಣಿಯ ಪ್ರಶ್ನಾವಳಿ ಮತ್ತು ಸಚಿತ್ರ ಕಥೆಗಳನ್ನು ಬಳಸಿ ಮಾರ್ಗದರ್ಶನ ನೀಡುತ್ತದೆ. ಬಳಕೆದಾರರು ತಮ್ಮ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಿ, ಸೂಕ್ತ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ. ಸ್ವ-ಸಹಾಯ ವಿಭಾಗದಲ್ಲಿ ಚಿಂತೆ ಕಡಿಮೆ ಮಾಡುವ, ಮನಸ್ಸನ್ನು ಶಾಂತಗೊಳಿಸುವ, ಕೋಪ ಅಥವಾ ಉದ್ವೇಗ ನಿಯಂತ್ರಣ ಚಟುವಟಿಕೆಗಳು ಒದಗಿಸಲಾಗಿದೆ.
ತುರ್ತು ಪರಿಸ್ಥಿತಿಗೆ ಸಹಾಯಕ್ಕಾಗಿ ಟೆಲಿಮನಸ್ ಸೇರಿದಂತೆ ತುರ್ತು ಬೆಂಬಲ ಸಂಪರ್ಕ ಸಂಖ್ಯೆಗಳ ಡೈರೆಕ್ಟರಿ ಕೂಡ ಲಭ್ಯ. ಬಳಕೆದಾರರು ಪಠ್ಯ ಅಥವಾ ಆಡಿಯೊ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ಭವಿಷ್ಯದಲ್ಲಿ ಈ ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿಕೋರಿ, ಮೌಲ್ಯಮಾಪನದ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗತ್ತೆ ಅಂತ ನಿಮ್ಹಾನ್ಸ್ ಹೇಳಿದೆ.
ವರದಿ : ಲಾವಣ್ಯ ಅನಿಗೋಳ



