ಉತ್ತರಪ್ರದೇಶದ ಪಂಚಾಯಿತಿ ರಾಜ್ಯ ಮಂತ್ರಿಯಾಗಿರುಲ ಭೂಪೇಂದ್ರ ಸಿಂಗ್ ಚೌಹಾಣ ಓವೈಸಿ ಬಗ್ಗೆ ಹೇಳಿಕೆ ನೀಡಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ್ರೆ, ಅಸಾವುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆಂದು ಹೇಳಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ತಾನು ಬ್ರಾಹ್ಮಣ ಎಂದು ಹೇಳಿಕೊಂಡು ಜನಿವಾರ ಧರಿಸಿ ಓಡಾಡುತ್ತಿದ್ದಾರೆ. ಅಖಿಲೇಶ್ ಯಾದವ್ ರಾಮ ನಾಮ ಜಪ ಮಾಡುತ್ತ, ಹನುಮಂತನ ದೇವಸ್ಥಾನ ಸುತ್ತುತ್ತಿದ್ದಾರೆ. ಅದೇ ರೀತಿ ಓವೈಸಿ ಜನಿವಾರ ಧರಿಸಿ, ರಾಮ ನಾಮ ಜಪ ಮಾಡುವ ದಿನವೂ ದೂರವಿಲ್ಲ. ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಯೋಗಿ ಸಿಎಂ ಆದ್ರೆ ಓವೈಸಿ ಈ ರೀತಿ ಮಾಡುತ್ತಾರೆಂದು ಹೇಳಿದ್ದಾರೆ.
ಇವರೆಲ್ಲ ಮೊದಲು ದೇವಸ್ಥಾನಕ್ಕೆ ಹೋಗುವುದಿಲ್ಲ. ಆದ್ರೆ ಇವರು ಇದೀಗ ರಾಜನೀತಿಯ ಆಧಾರದ ಮೇಲೆ ತಮ್ಮ ಗುರಿಯನ್ನು ಬದಲಾಯಿಸಿದ್ದಾರೆ. ಅಖಿಲೇಶ್ ಯಾದವ್ ಅಪ್ಪ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ಆದ್ರೆ ಮಗ ಈಗ ದೇವಸ್ಥಾನಕ್ಕೆ ಹೋಗ್ತಾರೆ. ರಾಹುಲ್ ಗಾಂಧಿ ಪೂರ್ವಜರು ರಾಮ ಇದ್ದಾನೆ ಅನ್ನೋದೇ ಒಪ್ಪುತ್ತಿರಲಿಲ್ಲ. ಆದ್ರೀಗ ರಾಹುಲ್ ತಾನು ಬ್ರಾಹ್ಮಣ ಎನ್ನುತ್ತಿದ್ದಾರೆ. ದೇವಸ್ಥಾನಕ್ಕೂ ಹೋಗ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಮತ್ತೆ ಶುರುವಾದ್ರೆ ಓವೈಸಿಯೂ ಜನಿವಾರ ಹಾಕ್ತಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಓವೈಸಿ, ನಾನು ಇಂಥ ಅಸಹ್ಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

