Saturday, October 5, 2024

Latest Posts

‘ನಾನು ಮನಸ್ಸು ಮಾಡಿದ್ರೆ ಅತೃಪ್ತರನ್ನು ಕೂಡಿಹಾಕಬಹುದಿತ್ತು’- ಡಿಕೆಶಿ

- Advertisement -

ಬೆಂಗಳೂರು: ಅತೃಪ್ತ ಶಾಸಕರನ್ನು ಸಂಪರ್ಕಮಾಡಲು ವಿಫಲರಾಗಿ ಕೈಚೆಲ್ಲಿ ಕುಳಿತಿರುವ ಡಿಕೆಶಿ ಬಿಜೆಪಿ ಅವರನ್ನು ಕೂಡಿಹಾಕಿದೆ. ಮನಸ್ಸು ಮಾಡಿದ್ದರೆ ನಾನೇ ಅವರನ್ನು ಕೂಡಿಹಾಕಬಹುದಿತ್ತು ಆದರೆ ನಾನು ಆ ಕೆಲಸ ಮಾಡಲು ಹೋಗಲಿಲ್ಲ ಅಂತ ಡಿಕೆಶಿ ಹೇಳಿದ್ರು.

ಸದನದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಅತೃಪ್ತ ಶಾಸಕರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಬಿಜೆಪಿ ನೋಡಿಕೊಂಡಿದೆ. ಅವರು ರಾಜೀನಾಮೆ ನೀಡಿದ ದಿನವೇ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದೆ. ನಮ್ಮ ಮನೆಗೆ ಅತೃಪ್ತ ಶಾಸಕರ ಪೈಕಿ ಐವರನ್ನು ಕರೆದೊಯ್ದಿದ್ದೆ. ಅಂದೇ ಅವರನ್ನು ನನ್ನಿಂದ ಕೂಡಿಹಾಕುವುದಕ್ಕಾ ಆಗುತ್ತಿರಲಿಲ್ವಾ, ಶಾಸಕ ಎಂಟಿಬಿ ನಾಗರಾಜ್ ಮನೆಗೆ ಹೋಗಿ ನಾನು ಅವರನ್ನು ಮಾತನಾಡಿಸಿರಲಿಲ್ವಾ, ನನ್ನೊಂದಿಗೆ ಕೃಷ್ಣ ಭೈರೇಗೌಡ ಮತ್ತು ಪರಮೇಶ್ವರ್ ಕೂಡ ಇದ್ದರು. ಚರ್ಚೆ ಬಳಿ ಎಂಟಿಬಿ ಅವರ ಹೇಳಿಕೆಯನ್ನೂ ನೀಡಿದ್ರು. ಆಗಲೇ ಅವರನ್ನು ಕೂಡಿಹಾಕಲು ಸಾಧ್ಯವಿತ್ತಲ್ಲ ಅಂತ ಪ್ರಶ್ನಿಸಿದ ಡಿಕೆಶಿ, ನಾವು ಅವರ ಮೇಲಿನ ನಂಬಿಕೆಯಿಂದ ಅವರನ್ನು ಕೂಡಿಹಾಕಲಿಲ್ಲ. ಇನ್ನು ಶಾಸಕ ಮುನಿರತ್ನ ಕೂಡ ನನ್ನೊಂದಿಗೆ ಇದ್ದರು. ಆದ್ರೆ ಇವರೆಲ್ಲರನ್ನೂ ಬಿಜೆಪಿ ಇದೀಗ ಮುಂಬೈನಲ್ಲಿ ಕೂಡಿಹಾಕಿದೆ ಅಂತ ಡಿಕೆಶಿ ಆರೋಪಿಸಿದ್ರು.

ಇನ್ನು ಅತೃಪ್ತ ಶಾಸಕರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ನಾವು ಮುಂಬೈಗೆ ತೆರಳಿದ್ದೆವು. ನಮ್ಮನ್ನು ಭೇಟಿ ಮಾಡ್ತೀವಿ ಅಂತ ಹೇಳಿದ್ದ ಶಾಸಕರು ಭೇಟಿಗೆ ನಿರಾಕರಿಸಿದ್ರು. ಅಲ್ಲದೆ ಹೋಟೆಲ್ ಹೊರಗೆ ಮಳೆಯಲ್ಲಿ ನಿಂತಿದ್ದ ನನಗೆ ಬುಕ್ ಆಗಿದ್ದ ರೂಂ ಕೂಡ ನೀಡಲಿಲ್ಲ. ಶಾಸಕರೂ ಸಹ ನಮ್ಮನ್ನು ಭೇಟಿ ಮಾಡಲು ಸಾಧ್ಯವಿಲ್ಲ ಅವರಿಗೆ ಅವಕಾಶ ನೀಡಬೇಕಿ ಅಂತ ಪೊಲೀಸರಿಗೆ ಹೇಳಿ ನಮ್ಮನ್ನು ಅಲ್ಲಿಂದ ಬೇರೆಡೆ ಹಾಕಿದ್ರು. ಕೊನೆಗೆ ಮುಂಬೈ ಏರ್ಪ ಪೋರ್ಟ್ ಗೆ ತಂದು ಬಿಸಾಕಿದ್ರು ಅಂತ ಡಿಕೆಶಿ ಬೇಸರ ವ್ಯಕ್ತಪಡಿಸಿದ್ರು.

- Advertisement -

Latest Posts

Don't Miss