ಸಿದ್ದರಾಮಯ್ಯ ಲಿಂಗಾಯತರ ಬಗ್ಗೆ ಏನೇನ್ ಭಾಷಣ ಮಾಡಿದ್ದಾರೆ ಎಲ್ಲಾ ದಾಖಲೆಗಳು ಈಗಲೂ ಲಭ್ಯವಿದೆ : ಸಚಿವ ಜೆ.ಸಿ ಮಧುಸ್ವಾಮಿ

ಹಾಸನ: ಲಿಂಗಾಯತರನ್ನು ಯಾವ ಮಠಗಳು, ಯಾರು ಬದಲಾವಣೆ ಮಾಡುವುದಾಗಲಿ, ಅದರ ವಿರುದ್ಧವಾದ ತೀರ್ಮಾನ ಮಾಡುವಂತಹ ಕೆಲಸವನ್ನು ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ನಡೆದಿಲ್ಲ ಎಂದು ಬೇಲೂರಿನಲ್ಲಿ ಸಣ್ಣ ನೀರಾವರಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಲಿಂಗಾಯತರನ್ನು ಒಕ್ಕೊರಲಾಗಿ ಓಟು ಹಾಕ್ಸಿದ್ದು ಯಡಿಯೂರಪ್ಪ ಒಬ್ಬರೇ, ಲಿಂಗಾಯತರನ್ನು ಒಂದು ಮಾಡಿಕೊಂಡು ಎಂದೂ ರಾಜಕೀಯ ಮಾಡಲು ಯಾರಿಗೂ ಆಗಿಲ್ಲ. ಮಠಗಳು ನಮ್ಮ ಪರವಾಗಿ ಇದ್ದವು, ಈಗಲೂ ಇವೆ, ಅವೆಲ್ಲವನ್ನೂ ಇಟ್ಟುಕೊಂಡು ರಾಜಕೀಯ ಮಾಡಲು ಹೋದರೆ ಆಗುವುದಿಲ್ಲ ಎಂದು ಸಚಿವರು ಹೇಳಿದರು.

ಅರುಣಾಚಲದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆ

ಎಂ.ಬಿ.ಪಾಟೀಲ್ ಅವರೇ ಲಿಂಗಾಯತರ ಐಕ್ಯತೆಯನ್ನು ಒಡೆಯಲು ಕೈಹಾಕಿದ್ದರು ಅಂಥ ಎಲ್ಲಾ ಲಿಂಗಾಯಿತರಿಗೂ ಗೊತ್ತು. ಸಿದ್ದರಾಮಯ್ಯ ಎಂ.ಬಿ.ಪಾಟೀಲ್‌ರನ್ನು ಟ್ರೊಲ್ ಮಾಡಿಕೊಂಡು ಲಿಂಗಾಯಿತರೇ ಬೇರೆ, ವೀರಶೈವರೇ ಬೇರೆ ಅಂತ ಒಡೆಯಲು ಹೋಗಿದ್ದು ದೊಡ್ಡ ದುರಂತ. ಈ ಸಮಾಜ ಇನ್ನೂ ಮರೆತಿಲ್ಲ ನಮ್ಮನ್ನ ಒಡೆದು ಆಳಲು ಹೊರಟಿದ್ದಾರೆ ಎಂದು ಗೊತ್ತಾದ ದಿನದಿಂದ ಅಲ್ಪಸ್ವಲ್ಪ ಇದ್ದವರು ಕಾಂಗ್ರೆಸ್ ಕೈಬಿಟ್ಟಿದ್ದಾರೆ ಎಂದು ಸಚಿವ ಮಧುಸ್ವಾಮಿ ಅವರು ಹೇಳಿದರು. ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆ ಮಾಡಿ, ಲಿಂಗಾಯತರ ಬಗ್ಗೆ ಏನೇನ್ ಭಾಷಣ ಮಾಡಿದ್ದಾರೆ ಎಲ್ಲಾ ದಾಖಲೆಗಳು ಈಗಲೂ ಲಭ್ಯವಿದೆ ಅದನ್ನೆಲ್ಲಾ ಕೇಳಿದರೆ ಯಾರಾದ್ರೂ ಸಿದ್ದರಾಮಯ್ಯ ಅವರ ಹಿಂದೆ ಹೋಗುತ್ತಾರಾ ಅವರನ್ನು ಬೆಂಬಲಿಸುತ್ತಾರಾ ಎಂದು ಸಚಿವರು ಪ್ರಶ್ನೆ ಮಾಡಿದರು.

ವೋಟರ್ ಐಡಿ ಹಗರಣ ವಿವಾದದ ಕುರಿತು ಸಚಿವ ಮಧುಸ್ವಾಮಿ ಪ್ರತಿಕ್ರಿಯೆ

ಮಕ್ಕಳನ್ನು ನೋಡಲು ಬಿಡಲಿಲ್ಲವೆಂದು ಪತ್ನಿ, ಮಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪತಿ

 

About The Author