Thursday, November 27, 2025

Latest Posts

ಸಚಿವ ನಾರಾಯಣಗೌಡರ ಕಾರಿನಲ್ಲಿ ಜೆಡಿಎಸ್ ಎಂಎಲ್‌ಸಿ ಪಯಣ..!

- Advertisement -

ನಾಗಮಂಗಲ: ಮಂಡ್ಯದ ನಾಗಮಂಗಲದಲ್ಲಿ ಸಚಿವ ನಾರಾಯಣಗೌಡ ಮಾತನಾಡಿದ್ದು, ಪಿಪಿಇ ಕಿಟ್ ಮತ್ತು ಆರೋಗ್ಯ ರಕ್ಷಾ ಸಾಮಾಗ್ರಿಗಳ ಖರೀದಿಯಲ್ಲಿ ಆರಂಭದಲ್ಲಿ ವ್ಯತ್ಯಾಸವಾಗಿರೊದು ನಿಜ ಎಂದಿದ್ದಾರೆ.

ಆರಂಭದಲ್ಲಿ ಟೆಂಡರ್ ನಡೆಸದೆ ಹಾಗೂ ದರ ಪರಿಶೀಲನೆ ನಡೆಸದೆ ಖರೀದಿ ಮಾಡಲಾಗಿದೆ.ಆರಂಭದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಾಗಿರೊದು ನಿಜ. ಸರ್ಕಾರ ಇದುವರೆಗೂ ೫೫೦ ರಿಂದ ೬೦೦ ಕೋಟಿ ಅಷ್ಟೇ ಖರ್ಚು ಮಾಡಿರೊದು ಆದರೆ ವಿರೋಧ ಪಕ್ಷದ ನಾಯಕರು ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ನಾರಾಯಣಗೌಡ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರಿಗೆ ಏನು ಕೆಲಸವಿಲ್ಲ. ಸರ್ಕಾರದ ಟೀಕೆ ಟಿಪ್ಪಣಿಗಳನ್ನು ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಕರೊನಾ ನಿಯಂತ್ರಣಕ್ಕೆ ಸಹಕರಿಸಲಿ. ಸಿದ್ರಾಮಣ್ಣ ಬೇಕಿದ್ದರೆ ತನಿಖೆ ನಡೆಸಲಿ ನಮಗೆ ಭಯವಿಲ್ಲ. ೩ ರಿಂದ ೪ ಬಾರಿ ಆಡಳಿತ ನಡೆಸಿರುವ ಇವರು ಸರ್ಕಾರಕ್ಕೆ ಸಹಾಯ ಮಾಡೋದು ಬಿಟ್ಟು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ನಮ್ಮ ಸಿಎಂ ಯಾವುದೇ ಲೂಟಿ ಮಾಡಲು ಬಿಡಲ್ಲ ‌, ಸ್ವತಃ ಅವರು ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪರ ಸಚಿವ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ಕೊರೊನಾ ನಿಯಮದಂತೆ ದೇವಾಲಯಗಳಿಗೆ ಪ್ರವೇಶವಿಲ್ಲದಿದ್ದದ್ದರು ಸಚಿವರ ಭೇಟಿ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ಸಚಿವರು ಸಾರ್ವಜನಿಕರಲ್ಲವೇ..? ನಾವೆಲ್ಲರೂ ಹಿಂದೂ ಧರ್ಮದವರು ಹಾಗಾಗಿ ಪೂಜೆ ಸಲ್ಲಿಸುವುದು ದಿನನಿತ್ಯದ ಕರ್ಮಗಳಲ್ಲಿ ಒಂದು ಎಂದು ಸಚಿವರ ನಡೆಯನ್ನು ಸಮರ್ಥಿಸಿಕೊಂಡರು.

ಸಚಿವರ ಕಾರಿನಲ್ಲಿ JDS ಎಂಎಲ್ಸಿ ಪಯಣ..!
ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು ಸಚಿವ ನಾರಾಯಣಗೌಡರ ವಿರುದ್ದ ಕಿಡಿಕಾರುತ್ತಿದ್ದರೆ ಅದೇ ಪಕ್ಷದ ಎಂಎಲ್ಸಿ ಅಪ್ಪಾಜಿಗೌಡ ಒಂದೇ ಕಾರಿನಲ್ಲಿ ಪಯಣಿಸಿದ್ದು ನೆರೆದಿದ್ದ ಜೆಡಿಎಸ್ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮೂಡಿಸಿತು.
ಪ್ರಸನ್ನ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss