ಬೆಳಗಾವಿ: ಸರ್ಕಾರ ವಿಸರ್ಜನೆ ಕುರಿತ ಬಸವರಾಜ ಹೊರಟ್ಟಿ ಹೇಳಿಕೆಗೆ ಅಷ್ಟು ಮಹತ್ವ ಕೊಡಬೇಕಿಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಬಸವರಾಜ್ ಹೊರಟ್ಟಿ ಹೇಳಿಕೆಗೆ ಅಷ್ಟು ಮಹತ್ವ ಕೊಡಬೇಕಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ರೆ ವಿಚಾರ ಮಾಡಬೇಕಾಗುತ್ತದೆ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರು ಆ ರೀತಿ ಹೇಳಿದ್ರೆ ಗಂಭೀರವಾಗಿ ತೆಗೆದುಕೊಳ್ಳಬಹುದು. ಆದ್ರೆ ಯಾರೋ ಏನೊ ಹೇಳಿದ್ರೆ ಏನೂ ಆಗಲ್ಲ. ಬಸವರಾಜ್ ಹೊರಟ್ಟಿ ಹೇಳಿಕೆಯಿಂದ ಏನೂ ಆಗಲ್ಲ. ಅದು ಅವರ ವಯಕ್ತಿಕ ಹೇಳಿಕೆ. ಅವರ ಆ ಹೇಳಿಕೆಯಿಂದ ಸರ್ಕಾರಕ್ಕ ಏನೂ ತೊಂದರೆ ಆಗಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.




