ದ.ಕ.ಜಿಲ್ಲೆಗೆ ಆದಾಯ ಹೆಚ್ಚಲು ಸಲಹೆ ನೀಡುವ ಸಚಿವರ ಜಿಲ್ಲೆಯಲ್ಲೇ ಆದಾಯ ಇಳಿಯುತ್ತಿದೆ: ರವಿ ವ್ಯಂಗ್ಯ

Political News: ಬಿಜೆಪಿ ನಾಯಕ ಸಿ.ಟಿ.ರವಿ ಕಲಬುರಗಿಯಲ್ಲಿ ತಲಾ ಆದಾಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ವಿಚಾರವಾಗಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ದಕ್ಷಿಣ ಕನ್ನಡದಂತಹ ಜಿಲ್ಲೆಯ ಆದಾಯ ಹೆಚ್ಚಲು ಏನು ಮಾಡಬೇಕು ಎಂದು ಸಲಹೆ ನೀಡುತ್ತಿದ್ದರು. ಆದರೆ, ಖರ್ಗೆ ಅವರು ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ದಶಕಗಳ ಕಾಲ ಪ್ರತಿನಿಧಿಸಿದ, ಈಗ ಪ್ರಿಯಾಂಕ್ ಖರ್ಗೆಯವರು ಶಾಸಕರು, ಸಚಿವರಾಗಿರುವ ಕಲಬುರಗಿ ಕ್ಷೇತ್ರದ ಕಥೆ ಮಾತ್ರ ದಿನೇ ದಿನೇ ವೈಫಲ್ಯದ ಹಾದಿ ಹಿಡಿಯುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚುತ್ತಿದ್ದರೆ, ಕಲಬುರಗಿಯ ತಲಾ ಆದಾಯ ದಿನದಿಂದ ದಿನಕ್ಕೆ ಇಳಿಯುತ್ತಿದೆ ಎಂದು ರವಿ ವ್ಯಂಗ್ಯವಾಡಿದ್ದಾರೆ.

ಪ್ರಿಯಾಂಕ್ ಖರ್ಗೆಯವರು ಬೇರೆ ಜಿಲ್ಲೆಗಳ ಕುರಿತು ಮಾತನಾಡುವ ಮುನ್ನ, ತಾನು ಪ್ರತಿನಿಧಿಸುತ್ತಿರುವ ಕಲಬುರಗಿ ಹೇಗಿದೆ ಎಂದು ಗಮನ ಹರಿಸಬೇಕು. ದಶಕಗಳ ಕಾಲ ಆಡಳಿತ ನಡೆಸಿ, ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ಯಾವ ಒಂದು ಕ್ಷೇತ್ರದಲ್ಲೂ ಕಲಬುರಗಿಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದವರು ಯಾವ ರೀತಿಯ ಮಾದರಿ ನಿರ್ಮಿಸಬಲ್ಲರು? ಎಂದು ರವಿ ಪ್ರಶ್ನಿಸಿದ್ದಾರೆ

ಆರೆಸ್ಸೆಸ್ ಅನ್ನು ದೆವ್ವ ಎನ್ನುವ, ಬಿಜೆಪಿಯನ್ನು ಬಾಯಿಗೆ ಬಂದಂತೆ ನಿಂದಿಸುವ ಪ್ರಿಯಾಂಕ್ ಖರ್ಗೆಯವರನ್ನು ಕಲಬುರಗಿಯ ಜನರು ಏನೆಂದು ಬೈಯಬೇಕು? ದೇಶಕ್ಕೆ ಬುದ್ಧಿವಾದ ಹೇಳುವ ಪ್ರಿಯಾಂಕ್ ಖರ್ಗೆಯವರ ಬಳಿ ಕಲಬುರಗಿ ಅಭಿವೃದ್ಧಿಗೆ ಯಾವ ಸ್ಪಷ್ಟ ಯೋಜನೆಗಳಿವೆ? ಬಹುಶಃ ಶೂನ್ಯ! ಎಂದು ಪ್ರಿ.ಾಂಕ್ ಖರ್ಗೆ ವಿರುದ್ಧ ರವಿ ವಾಗ್ದಾಳಿ ನಡೆಸಿದ್ದಾರೆ.

About The Author