ಲಾಕ್ ಡೌನ್ ಮುಗಿದಮೇಲೆ ಎಲ್ಲಾ ಕೈಗಾರಿಕೆಗಳಿಗೂ ಇದು ಕಡ್ಡಾಯ.!

ಕರ್ನಾಟಕ ಟಿವಿ : ವಿಶಾಖಪಟ್ಟಣಂ ವಿಷಾನಿಲ ದುರಂತ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗ ಸೂಚಿಯನ್ನ ಬಿಡುಗಡೆ ಮಾಡಿದೆ. ಲಾಕ್ ನಂತರ ಕಾರ್ಖಾನೆಗಳನ್ನ ಓಪನ್ ಮಾಡುವಾಗ ಒಂಮದುವಾರಗಳ ಕಾಲ ಟೆಸ್ಟ್ ರನ್ ರೀತಿಯೇ ಶುರು ಮಾಡಬೇಕು ಅಂತ ಗೃಹ ಇಲಾಖೆ ಸೂಚಿಸಿದೆ. ಸರಿಸುಮಾರು ಎರಡು ತಿಂಗಳುಗಳ ಕಾಲ ಕಾರ್ಖಾನೆಗಳು ಸ್ಥಗಿತವಾಗಿದ್ದ ಕಾರಣ ರಾಸಾಯನಿಕ, ಅನಿಲ ಸಂಬಂಧಿಸಿದ ಕಾರ್ಖಾನೆಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಈ ಸೂಚನೆ ನೀಡಿದೆ.

About The Author