ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯನವರ ಸಂಪುಟ ಪುನಾರಚನೆಯಾಗುತ್ತದೆ ಎಂದು ಹೇಳಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಐದು ವರ್ಷ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ ಅಂತ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದರು. ಆದ್ರೆ ಈ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಸಚಿವರು ಮಾತ್ರವಲ್ಲ ಸಿಎಂ ಕೂಡ ಬದಲಾಗುತ್ತಾರೆ. ಅಕ್ಟೋಬರ್ ಕ್ರಾಂತಿಗೆ ಇದೊಂದು ವೇದಿಕೆಯಾಗುತ್ತದೆ ಎಂದಿದ್ದಾರೆ.
ಜಮೀರ್ ಅಹ್ಮದ್ ನೀಡಿದ ಹೇಳಿಕೆಯೇ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಗೊಂದಲವನ್ನು ಹುಟ್ಟುಹಾಕಿದೆ. ಅದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಜಮೀರ್ ಹೇಳಿಕೆಗೆ ತೀವ್ರ ಟಾಂಗ್ ನೀಡಿದ್ದಾರೆ. ಇದು ತಂತ್ರವಿಲ್ಲದ ಅತಂತ್ರ ಸರ್ಕಾರ. ಇವರು ನೀಡಿದ ಹೇಳಿಕೆ ಅಕ್ಟೋಬರ್ ಕ್ರಾಂತಿಗೆ ಸೂಚನೆ. ಹೀಗಾಗಿ ಈ ಸರ್ಕಾರದಲ್ಲಿ ಸಿಎಂ ಬದಲಾವಣೆಯೂ ನಡೆಯಬಹುದು ಅಂತ ಅಕ್ಟೋಬರ್ ಕ್ರಾಂತಿ ಬಗ್ಗೆ ಎಂದು ಭವಿಷ್ಯ ನುಡಿದರು.
ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಅಕ್ಟೋಬರ್ ಕ್ರಾಂತಿ ಆಗೋದು ಖಚಿತ. ಕ್ರಾಂತಿ ಬಗ್ಗೆ ಮಾತಾಡೋರೆಲ್ಲ ಹೋಗ್ತಿದ್ದಾರೆ. ರಾಜಣ್ಣ ವಜಾ ಆದ್ರು. ಒಟ್ಟಿನಲ್ಲಿ ಅಕ್ಟೋಬರ್ ಕ್ರಾಂತಿ ಆಗೋದು ಖಚಿತ. ಅಕ್ಟೋಬರ್ ಕ್ರಾಂತಿ ಆಗಿ ಸರ್ಕಾರ ಬಿದ್ದು ಹೋದರೆ ನಾವು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಗೆ ಹೋಗ್ತೇವೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಒಳಾಂಗಣದಲ್ಲಿ ಸಚಿವ ಸಂಪುಟ ಪುನಾರಚನೆ, ವಿಸ್ತರಣೆ, ಮತ್ತು ಸಿಎಂ ಬದಲಾವಣೆಯ ಬಗ್ಗೆ ಮಾತುಗಳು ಗಂಭೀರವಾಗಿ ಕೇಳಿಬರುತ್ತಿವೆ. ಇದು ಕಾಂಗ್ರೆಸ್ ಪಕ್ಷದ “ಅಂತರಕಲಹವೋ”? ಅಥವಾ ವಾಸ್ತವಕ್ಕೂ ಹತ್ತಿರದ ಅಕ್ಟೋಬರ್ ಕ್ರಾಂತಿಯ ಆರಂಭವೋ ಎನ್ನುವುದನ್ನು ಕಾಲವೇ ತೀರ್ಮಾನಿಸಬೇಕಿದೆ.
ವರದಿ : ಲಾವಣ್ಯ ಅನಿಗೋಳ