MLAಗೆ ಕೈಮುಗಿದ ಪೋರ.. ಫೇಸ್ಬುಕ್ನಲ್ಲಿ ಸದ್ದು ಮಾಡುತ್ತಿದೆ ಫೋಟೋ

ಧಾರವಾಡ: ಕಳೆದ ಎರಡ್ಮೂರು ದಿನಗಳಿಂದ ಫೇಸ್ಬುಕ್‌ನಲ್ಲಿ ಈ ಫೋಟೋ ಸದ್ದು ಮಾಡುತ್ತಿದೆ. ಶಾಸಕ ಅಮೃತ ದೇಸಾಯಿ ಅವರಿಗೆ ಪುಟಾಣಿ ಪೋರನೊಬ್ಬ ಕೈಮುಗಿದ ಫೋಟೋ ಇದು. ಈ ಫೋಟೋ ಎಲ್ಲಿಯದು ಆ ಪೋರ ಶಾಸಕರಿಗೇಕೆ  ಕೈಮುಗಿದಿದ್ದಾನೆ ಎನ್ನುವುದೇ ಪ್ರಶ್ನೆಯಾಗಿದೆ.

ಶಾಸಕ ಅಮೃತ ದೇಸಾಯಿ ಅವರು ಧಾರವಾಡ ತಾಲೂಕಿನ ಕಡೆಯ ಗ್ರಾಮವಾದ ಮಾದನಭಾವಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ಇತ್ತೀಚೆಗೆ ನಿಧನರಾದ ಮಹದೇವಪ್ಪ ದೊಡವಾಡ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಲ್ಲಿಂದ ಕಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಯೂ ಇತ್ತೀಚೆಗೆ ನಿಧನರಾದ ಬಸಪ್ಪ ಯಡಳ್ಳಿ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆ ಮನೆಯ ಪೋರ ಶಾಸಕರಿಗೆ ಈ ರೀತಿ ಕೈಮುಗಿದಿದ್ದಾನೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರ್ನಾಟಕ ಟಿವಿ, ಹುಬ್ಬಳ್ಳಿ-ಧಾರವಾಡ

About The Author