ಬೆಂಗಳೂರು : ಕೇಂದ್ರ ಸರ್ಕಾರ ಸಂಸದರ ಸಂಬಳ 30% ಕಟ್ ಮಾಡಿದ ಬೆನ್ನೆಲೆ ರಾಜ್ಯ ಸರ್ಕಾರವೂ ಎಂಎಲ್ ಎ, ಎಂಎಲ್ ಸಿಗಳ ಶೇಕಡಾ 30% ಸಂಬಳ ಕಟ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.. ಹೀಗೆ ಒಂದು ವರ್ಷಗಳ ಕಾಲ ಕಟ್ ಮಾಡಿದ್ರೆ ಸುಮಾರು 16 ಕೋಟಿ ಉಳಿತಾಐವಾಗುತ್ತೆ.. ಈ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಳಸುವುದಾಗಿ ಸಿಎಂ ತಿಳಿಸಿದ್ರು. ಇನ್ನು ಅಕಾಲಿಕ ಮಳೆಯಿಂದ ರೈತರಿಗೆ ನಷ್ಟವಾಗಿದ್ದು ಅದನ್ನ ಸಮೀಕ್ಷೆ ಮಾಡಿ ನಷ್ಟವನ್ನ ತುಂಬಿಕೊಡುವ ಕೆಲಸ ಮಾಡ್ತೇವೆ ಅಂತ ಸಿಎಂ ಹೇಳಿದ್ತು. ಹಾಗೆಯೇ ಲಾಕ್ ಡೌನ್ ಮುಂದುವರೆಸಬೇಕಾ..? ಬೇಡ್ವಾ ಎನ್ನುವ ಬಗ್ಗೆ ಇಂದು ತೀರ್ಮಾನ ಮಾಡಿಲ್ಲಅಂತ ಹೇಳಿದ್ರು.. ಆದ್ರೆ, ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ನಾಳೆ ಪ್ರಧಾನಿಯವರ ಜೊತೆ ಮಾತನಾಡಿದ ನಂತರ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ರು. ಆದ್ರೆ ಏಪ್ರಿಲ್ 14ರ ವರೆಗೂ ಅನವಶ್ಯಕವಾಗಿ ಹೊರಗಡೆ ಬರಬೇಡಿ ಅಂತ ಯಡಿಯೂರಪ್ಪ ಮನವಿ ಮಾಡಿದ್ರು.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು

