Political News: ಬಿಜೆಪಿ ಆಫರ್ ಬಗ್ಗೆ ಶಾಸಕ ರವಿ ಗಾಣಿಗ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಉಪಗನರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ , ಮಾಜಿ ಶಾಸಕ ಪಿ.ರಾಜೀವ್ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ.
ಬಿಜೆಪಿ ಬ್ರೋಕರಗಳಿಂದ ನಮ್ಮ ಶಾಸಕರಿಗೆ ಆಫರ್ ನೀಡಿದ್ದಾರೆ ಅಂತಾ ಶಾಸಕ ರವಿ ಗಾಣಿಗ ಹೇಳಿಕೆ ವಿಚಾರವಾಗಿ ಇಂದು ಹುಬ್ಬಳ್ಳಿಯಲ್ಲಿ ರವಿ ಗಾಣಿಗ ವಿರುದ್ಧ ಮಾಜಿ ಶಾಸಕ ಪಿ.ರಾಜೀವ್ ದೂರು ನೀಡಿದ್ದಾರೆ.
ರವಿ ಗಾಣಿಗ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಠಾಣೆ ಮುಂದೆ ಶಾಸಕ ರವಿ ಗಾಣಿಗ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




