Monday, October 6, 2025

Latest Posts

ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ್ ರೆಡ್ಡಿ ಚಾಲನೆ

- Advertisement -

Political News:

Feb:25:ಬಿಜೆಪಿ ಶಾಸಕ ಸತೀಶ್ ರೆಡ್ಡಿ ಜನನಾಯಕರಾಗಿ ಹೆಸರು ಮಾಡಿದ್ದಾರೆ ಅನ್ನೋದಕ್ಕೆ ಅವರ ಕಾರ್ಯ ವೈಖರಿಯೇ ಸಾಕ್ಷಿ. ಜನಪರ ಕಾರ್ಯಗಳಿಂದ ಜನರ ಜೊತೆ ಬೆರೆಯೋ ನಾಯಕ ಸತೀಶ್ ರೆಡ್ಡಿ, ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮತ್ತೆ ಜನರಿಗಾಗಿ ವಿಶೇಷ ಯೋಜನೆ ಜಾರಿ ಮಾಡ್ತಿದ್ದಾರೆ.

ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಅರಕೆರೆ ವಾರ್ಡ್ ಬೃಂದಾವನ ಲೇಔಟ್ ನಲ್ಲಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದ ಶಾಸಕ ಸತೀಶ್ ರೆಡ್ಡಿ, ಜನರಿಂದ ಅಹವಾಲನ್ನು ಸ್ವೀಕರಿಸಿದರು. ಈ ಸಂದರ್ಬದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಪುರುಷೋತ್ತಮ, ರವಿ, ಭಾಗ್ಯಲಕ್ಷ್ಮಿ ಮುರಳಿ,ಮಾಜಿ‌ ನಗರಸಭಾ ಸದಸ್ಯರಾದ ಮುರಳಿ ,ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ಮತ್ತೊಂದೆಡೆ AECS ಲೇಔಟ್ ನಲ್ಲಿರುವ ಶ್ರೀ ಶ್ರೀ ಶ್ರೀ ಮಹಾಯೋಗಿ ವೇಮನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಅವರ ವಿಗ್ರಹ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಸತೀಶ್ ರೆಡ್ಡಿ ಪೂಜೆ ಸಲ್ಲಿಸಿದ್ರು. ಇದೇ ವೇಳೆ ಪುಷ್ಪಾರ್ಚನೆ ಮಾಡಿದ ಮಾತ್ನಾಡಿದ ಶಾಸಕ ಸತೀಶ್ ರೆಡ್ಡಿ, ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸೋದಾಗಿ ಹೇಳಿದ್ರು. ಈ ಸಂದರ್ಬದಲ್ಲಿ ವೇಮನನಂದ ಸ್ವಾಮೀಜಿ, ಶಾಸಕರಾದ ಶಿವಣ್ಣ ,ಸ್ಥಳೀಯ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಷ್ಟೇ ಅಲ್ಲದೆ, ಅಭಿವೃದ್ಧಿ ಕಾರ್ಯಕ್ರಮಗಳ ಜೊತೆ, ಧಾರ್ಮಿಕ, ಮನರಂಜನಾ ಕಾರ್ಯಕ್ರಮದಲ್ಲೂ ಶಾಸಕರು ಪಾಲ್ಗೊಳ್ತಿದ್ದು, ಜನರ ಜೊತೆ ತಾನಿದ್ದೇನೆ ಅಂತ ಸಾರಿ ಹೇಳ್ತಿದ್ದಾರೆ..

ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ, ಬೆಂಗಳೂರು..

ಚಿಕ್ಕಬಳ್ಳಾಪುರ: ರಾಮಲಿಂಗಪ್ಪ ನೇತೃತ್ವದ ಉಚಿತ ಕಣ್ಣಿನ ತಪಾಸಣ ಶಿಬಿರ

ಭವಾನಿ ರೇವಣ್ಣಗೆ ಟಿಕೇಟ್ ಪಕ್ಕಾ..?! ಅನುಮಾನ ಮೂಡಿಸಿದ ಭವಾನಿ ನಡೆ…!

ಮೂರನೇ ಭರವಸೆಯನ್ನು ಘೋಷಿಸಿದ  ಕಾಂಗ್ರೆಸ್ ಪಕ್ಷ “ಅನ್ನಭಾಗ್ಯ ಯೋಜನೆ”

- Advertisement -

Latest Posts

Don't Miss