Friday, November 28, 2025

Latest Posts

ಡಿಕಶಿವಕುಮಾರ್ CM ಆಗಲಿ ಎಂದು ಶಾಸಕನಿಂದ ಶತ್ರು ಸಂಹಾರ ಹೋಮ!

- Advertisement -

ತುಮಕೂರು ಜಿಲ್ಲೆಯ ಕುಣಿಗಲ್ ಶಾಸಕ ಡಾ. H.D. ರಂಗನಾಥ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಆಗಲೆಂದು ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿ ವಿಶೇಷ ಮೃತ್ಯುಂಜಯ ಹೋಮ ನೆರವೇರಿಸಿದರು.

ಈ ಧಾರ್ಮಿಕ ಕಾರ್ಯವನ್ನು ಡಿಕೆ ಶಿವಕುಮಾರ್ ಅವರ ಸಂಬಂಧಿ ಹಾಗೂ ಕುಣಿಗಲ್ ಶಾಸಕರಾದ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸಿಎಂ ಸ್ಥಾನಕ್ಕೆ ಅವರ ಹೆಸರು ಅಂತಿಮವಾಗಲೆಂದು ಹಾರೈಸಿ, ಮೃತ್ಯುಂಜಯ, ಶತ್ರುಸಂಹಾರ, ರುದ್ರ, ಸಿದ್ಧಲಿಂಗೇಶ್ವರ, ನವಗ್ರಹ ಸೇರಿದಂತೆ ಒಟ್ಟು ಹತ್ತು ಪ್ರಕಾರದ ಹೋಮಗಳನ್ನು ಭಕ್ತಿಯಿಂದ ನಡೆಸಲಾಯಿತು.

ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂತ್ರಘೋಷಗಳೊಂದಿಗೆ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ದೊರಕಲಿ ಎಂದು ಉಚ್ಛಾರಣೆ ಮಾಡಲಾಯಿತು. ಅಲ್ಲದೆ, ಸಿದ್ಧಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ 1001 ತೆಂಗಿನಕಾಯಿಗಳನ್ನು ಒಡೆದು ಸಮರ್ಪಿಸಲಾಯಿತು.

ಶಾಸಕ ಡಾ. ರಂಗನಾಥ್ ಅವರು ಸ್ವತಃ ಈ ಪೂಜೆಯಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ಬೆಂಬಲಿಗರು ಪೂರ್ಣಕುಂಭ ಸ್ವಾಗತ, ಪಂಚವಾದ್ಯ, ಮತ್ತು ಪಟಾಕಿ ಸಿಡಿಸುವ ಮೂಲಕ ಅದ್ದೂರಿ ಗೌರವ ಸೂಚಿಸಿದರು. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಾಗೂ ಶಾಸಕ ಡಾ. ರಂಗನಾಥ್ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಶಕ್ತಿ ಹಾಗೂ ಬಲವರ್ಧನೆಗಾಗಿ ನಿರಂತರವಾಗಿ ಶಕ್ತಿ ದೇವತೆಗಳ ಮೊರೆ ಹೋಗುತ್ತಿದ್ದು, ಹೋಮ ಹವನದ ಮುಖಾಂತರ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವಂತೆ ಅಭಿಮಾನಿಗಳು ಶಕ್ತಿ ದೇವತೆಗಳ ಮೊರೆ ಹೋಗಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss