Tuesday, May 14, 2024

Latest Posts

ಕಂಪನಿಗಳ ವೆಚ್ಚ ಕಡಿತಕ್ಕೆ ೯೩% ಸಿಇಒಗಳು ಆದ್ಯತೆ ಆದರೆ ಇನ್ನಷ್ಟು ಉದ್ಯೋಗ ಕಡಿತ

- Advertisement -

FINENCIAL STORY

ಈಗಾಗಲೆ ಆರ್ಥಿಕ ಬಿಕ್ಕಟನ್ನು ಎದುರಿಸುತ್ತಿರುವ ಭಾರತ ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೈಗಾರಿಕೆಗಳಿಂದ ಮತ್ತು ವಾಣಿಜ್ಯೋದ್ಯಮದಿಂದ ಮಾತ್ರ ದೇಶದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯ ಎನ್ನುವ ದೃಷ್ಟಿಯಿಂದ ವಿದೇಶದಿಂದ ಹಲವಾರು ಕೈಗಾರಿಕೆಗಳನ್ನು ಭಾರತಕ್ಕೆ ಕರೆಸಿಕೊಂಡು ಇಲ್ಲಿ ಸ್ಥಾಪನೆ ಮಾಡಿ ಸ್ವದೇಶಿಗರಿಗೆ ಉದ್ಯೋಗ ದೊರೆಯುವಂತೆ ಮಾಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿದರು.ಆದರೆ ಸಾಂಕ್ರಾಮಿಕ ಕೊರೋನಾ ಹಾವಳಿಯಿಂದ ಇಡಿ ದೇಶವೇ ತತ್ತರಿಸಿ ಹೋಗಿದೆ. ಎರಡು ವರ್ಷಗಳ ಕಾಲ ಕಂಪನಿಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಹಲವಾರು ಕಂಪನಿಗಳಿಗೆ ಆರ್ಥಕವಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದವು.ಹಾಗಾಗಿ ಕೊರೋನಾ ಮುಂಚೆ ಚೆನ್ನಾಗಿ ಕಾರ್ಯನಿರ್ವಹಿಸಿ ಹಲವಾರು ಜನರಿಗೆ ಕೆಲಸ ಕೊಟ್ಟು ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಿದ್ದ ಕಂಪನಿಗಳು ಕಟ್ಟಡಗಳ ಬಾಡಿಗೆ ಕಟ್ಟುವುದಕ್ಕೂ ಪರದಾಡುವಂತಹ ಸ್ಥಿತಿಗೆ ಬಂದು ತಲುಪಿದವು ಇನ್ನೂ ಮುಂದುವರಿದು ನೋಡುವುದಾದರೆ ಕೆಲಸಗಾರರಿಗೆ ಸಂಬಳವು ನೀಡುವುದಕ್ಕೆ ಆಗದೆ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇಷ್ಟಾದರೂ ಸಹ ಕಂಪನಿಗಳಿಗೆ ಲಾಭವೇನು ಆಗಲಿಲ್ಲ. ಯಾಕೆ ಅಂತ ನೋಡುವುದಾದರೆ ಕಂಪನಿಗೆ ಮುಖ್ಯ ಬುನಾದಿಯೇ ಗ್ರಾಹಕ ದೊಡ್ಡ ದೊಡ್ಡ ಶ್ರೀಮಂತರೇ ಹಣ ಅಭಾವ ಎದುರಿಸುತ್ತಿರವ ಸಂದರ್ಭದಲ್ಲಿ ದಿನಗೂಲಿ ಮಾಡಿ ಜೀವನ ನಡೆಸುವ ಸಾಮಾನ್ಯ ಕುಟುಂಬವಗಳ ಪರಿಸ್ಥಿತಿ ಯಾವ ಮಟ್ಟಿಗೆ ಇರಬೇಡ ನೀವೆ ಒಂದು ಸಲ ಯೋಚಿಸಿ. ಹೀಗಿರುವಾಗ ಕಂಪನಿ ಹಲವಾರು ಗ್ರಾಹಕರನ್ನ ಕಳೆದುಕೊಂಡು ಹೇಗೆ ತಾನೆ ಲಾಭ ಪಡೆಯಲು ಸಾದ್ಯ ನೀವೆ ಹೇಳಿ ಹಾಗಾಗಿ ಸಂಬಳ ನೀಡಲಾಗದೆ ಕೆಲಸಗಾರರನ್ನು ತಗೆದು ಹಾಕಲಾಯಿತು . ಇಷ್ಟಾದರೂ ಕಂಪನಿಗೆ ಲಾಭ ಸಿಗುತ್ತಿಲ್ಲ ಹಾಗಾಗಿ ಕಂಪನಿ ಇನ್ನೂ ಸ್ವಲ್ಪ ಕೆಲಸಗಾರರನ್ನ ತೆಗೆಯಲು ನಿರ್ದರಿಸಿತು.
ಆಗ ಕಂಪನಿಯ ಸಿಇಒಗಳು ಕೆಲಸಗಾರರನ್ನು ವಜಾಗೊಳಿಸಲು ಸಾಧ್ಯವಿಲ್ಲ .ಅದಕ್ಕೆ ನಮ್ಮ ಮನಸ್ಸು ಒಪ್ಪುವುದಿಲ್ಲ.ಎಂದು ಇದನ್ನತಮ್ಮ ಸಂಬಳದಲ್ಲಿ ಕಡಿತಗೊಳಿಸಲು ನಿರ್ದರಿಸಿದೆ.ಹೀಗಾಗಿ ಮತ್ತೆ ನಿರುದ್ಯೋಗ ಸಮಸ್ಯೆ ತಲೆ ಎತ್ತಲಿದೆ.

ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಮಧ್ಯೆ, ಶೇ. 93ರಷ್ಟು ಭಾರತೀಯ ಸಿಇಒಗಳು ತಮ್ಮ ಕಂಪನಿಯ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಲು ಯೋಜಿಸುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಇದೇ ಸಂದರ್ಭದಲ್ಲಿ ಸಿಇಒಗಳು ದೇಶದ ಆರ್ಥಿಕ ಭವಿಷ್ಯದ ಬಗ್ಗೆ ಆಶಾವಾದಿಗಳಾರುವುದೂ ಕಂಡು ಬಂದಿದೆ.ಪ್ರೈಸ್‌ ವಾಟರ್‌ಹೌಸ್‌ ಕೂಪರ್ಸ್‌ (ಪಿಡಬ್ಲ್ಯುಸಿ) ಬಿಡುಗಡೆ ಮಾಡಿದ ವಾರ್ಷಿಕ ಗ್ಲೋಬಲ್‌ ಸಿಇಒ ಸಮೀಕ್ಷೆಯ ಪ್ರಕಾರ, ಕಂಪನಿಗಳು ವೆಚ್ಚ ಕಡಿತದ ಭಾಗವಾಗಿ ಈಗಾಗಲೇ ಉದ್ಯೋಗಿಗಳ ಸಂಖ್ಯೆಯನ್ನು ಕಡಿತವನ್ನು ಮಾಡಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಿಗಳ ಕಡಿತ ಅಥವಾ ಸಂಬಳ ಕಡಿತ ಮಾಡಲು ಮುಂದಾಗುವುದಿಲ್ಲ.ಜಾಗತಿಕ ಸಿಇಒಗಳಿಗೆ ಹೋಲಿಸಿದರೆ ಭಾರತೀಯ ಸಿಇಒಗಳೇ ಕಂಪನಿಯಲ್ಲಿ ವೆಚ್ಚ ಕಡಿತಕ್ಕೆ ಹೆಚ್ಚು ಒಲವು ತೋರಿದ್ದಾರೆ. ಶೇ. 85ರಷ್ಟು ಜಾಗತಿಕ ಸಿಇಒಗಳು ಮತ್ತು ಶೇ. 81ರಷ್ಟು ಏಷ್ಯಾ ಪೆಸಿಫಿಕ್‌ ಭಾಗದ ಸಿಇಒಗಳು ವೆಚ್ಚ ಕಡಿತದ ಪರವಾಗಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಕುಸಿಯಲಿದೆ ಎನ್ನುವುದು ಭಾರತದ ಶೇ. 78ರಷ್ಟು ಸಿಇಒಗಳು ಮತ್ತು ಶೇ. 73ರಷ್ಟು ಜಾಗತಿಕ ಸಿಇಒಗಳ ಅಭಿಮತ.

ಈ ಜ್ಯೂಸ್ ಕುಡಿದರೆ ಸ್ಲಿಮ್ ಬಾಡಿ ನಿಮ್ಮದಾಗುತ್ತೆ..!

ಅಂತಿಮ ಹಂತ ತಲುಪಿದ ವಿಮಾನ ನಿಲ್ದಾಣ ಕಾಮಗಾರಿ!

ಎಸ್. ಎಸ್ ಎಲ್.ಸಿ ಅಂತಿಮ ವೇಳಾಪಟ್ಟಿ ಪ್ರಕಟ

- Advertisement -

Latest Posts

Don't Miss