Wednesday, August 6, 2025

Latest Posts

Mobile Video: ಬಸ್ ನಲ್ಲಿ ಕಳ್ಳತನ ಮಾಡುತ್ತಿರುವದು ಮೊಬೈಲ್ ನಲ್ಲಿ ವೀಡಿಯೋ ಸೆರೆಯಾಗಿದೆ.

- Advertisement -

ಕೊಪ್ಪಳ: ಸಾಮಾನ್ಯವಾಗಿ ಬಸ್ ಹತ್ತುವಾಗ ಸ್ವಲ್ಪ ಹುಷಾರಾಗಿರಿ, ಇಲ್ಲವಾದರೆ ನಿಮ್ಮ ಪಾಕೆಟ್ ಗೆ ಕತ್ತರಿ ಬೀಳುತ್ತೆ. ಹೌದು ಒಂದು ಕಡೆಗೆ ಸದ್ಯ ಶಕ್ತಿ ಯೋಜನೆಯಿಂದಾಗಿ ರಾಜ್ಯದಲ್ಲಿ ಬಸ್ ಗಳಲ್ಲಿ ಕಾಲಿಡಲು ಜಾಗಲಿಲ್ಲದಷ್ಟು ತುಂಬಿಕೊಂಡು ಹೋಗುತ್ತಿವೆ, ಮತ್ತೊಂದು ಕಡೆಗೆ ಕೆಲವರು ಇದೇ ಟೈಮ್ ಎಂದುಕೊಂಡು ಕಳ್ಳತನ ಮಾಡ್ತಾ ಇದ್ದಾರೆ.

ಹೌದು ಕಳ್ಳತನವನ್ನ ಹೇಗೆ ಮಾಡ್ತಾರೆ ಎಂಬುವುದಕ್ಕೆ ಕೊಪ್ಪಳದಲ್ಲಿನ ಈ ಒಂದು ಚಿತ್ರಣವೇ ಸಾಕ್ಷಿಯಾಗಿದ್ದು ಬಸ್ ಹತ್ತುವಾಗಿ ಯುವಕನೊಬ್ಬನ ಜೇಬಿಗೆ ಕೈ ಹಾಕಿ ಕಳ್ಳತನವನ್ನು ಮಾಡಲಾಗಿದೆ. ಹೀಗಾಗಿ ಬಸ್ ಹತ್ತುವಾಗ ಹುಷಾರಾಗಿರಿಬೇಕು.

ಗಣೇಶ ಹಬ್ಬದ ಸಮಯ ಹಾಗೂ ಶಕ್ತಿ ಯೋಜನೆ ಎಫೆಕ್ಟ್, ಶುರುವಾಯ್ತು ಕಳ್ಳರ ಕರಾಮತ್ತು ಎಂಬ ಮಾತುಗಳು ಈ ಒಂದು ಚಿತ್ರಣದಿಂದ ಕಂಡು ಬರುತ್ತಿದೆ. ರಶ್ ಇರೋ ಬಸ್ ನಲ್ಲಿ ಕಳ್ಳರ ಕೈಚಳ ಹೆಚ್ಚಾಗುತ್ತಿದೆ. ಬಸ್ ಹತ್ತೊ ನೆಪದಲ್ಲಿ ಪ್ರಯಾಣಿಕರ ಪರ್ಸ ಎಗರಿಸಿದ್ದಾನೆ ಕಳ್ಳ. ಗಂಗಾವತಿಯ ಜುಲಾಯಿ ನಗರದ ಬಸ್ ನಿಲ್ದಾಣದಲ್ಲಿ ಈ ಒಂದು ಘಟನೆ ನಡೆದಿದೆ. ಪರ್ಸ್ ಎಗರಿಸೊ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು ಗಂಗಾವತಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಪ್ರಯಾಣಿಕನ ಪರ್ಸ ಕಳ್ಳತನ ಮಾಡಲಾಗಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

BJP: ಕಾಂಗ್ರೆಸ್ನಲ್ಲಿ ಶೆಟ್ಟರ್ ಅವರನ್ನು ಯಾರು ಗುರುತಿಸುತ್ತಿಲ್ಲ: ಟೆಂಗಿನಕಾಯಿ.!

Prajwal Revanna : ಸಂಸದ ಪ್ರಜ್ವಲ್ ರೇವಣ್ಣಗೆ ಕೊಂಚ ರಿಲೀಫ್ : ಹೈಕೋರ್ಟ್‌ ಅಮಾನತು ಆದೇಶ ತಡೆ

Cauvery water : ಕರುನಾಡಿಗೆ ಮತ್ತೊಂದು ಶಾಕ್..!

- Advertisement -

Latest Posts

Don't Miss