Monday, December 23, 2024

Latest Posts

Karnataka ;ಅಂಗನವಾಡಿ ನೌಕರರ ಕೆಲಸಕ್ಕೆ ಆಪತ್ತು? ಸಿಎಂ ಹೇಳಿದ್ದೇನು?

- Advertisement -

ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಉನ್ನತಿಕರಿಸಲು ಸರಕಾರ ಚಿಂತನೆಯನ್ನು ನೇಡೆಸಿದೆ. ಸರಕಾರ ಶಾಲೆಗಳಂತೆ ಅಂಗನವಾಡಿ ಕೇಂದ್ರಗಳಲ್ಲೂ ಮಕ್ಕಳ ದಾಖಲಾತಿ ಪ್ರಮಾಣ ಇಳಿಕೆಯಾಗಿದೆ. ಖಾಸಗಿ ಶಾಲೆಗಳ ಪೈಪೋಟಿ ಜೊತೆಗೆ,ಕೆಪಿಎಸ್ ಶಾಲೆಗಳ ಆರಂಭ ಹಾಗೂ ಸರಕಾರಿ ಮಾಂಟೆಸರಿ ಆರಂಭಿಸುವ ಪ್ರಸ್ತಾಪದಿಂದ ಅಂಗನವಾಡಿ ಕೆಂದ್ರಗಳಿಗೆ ಕುತ್ತು ಬರುವ ಆತಂಕ ಎದುರಾಗಿದೆ ಈ ಹಿನ್ನಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮನವಿಯಂತೆ ಸರಕಾರ ಈ ಕುರಿತು ಗಂಭಿರ ಚಿಂತನೆ ನಡೆಸಿದೆ .

ಈಗಾಗಲೇ ಆದೇಶ ಹೊರಡಿಸಿರುವಂತೆ 2600 ಕರ್ನಾಟಕ ರಿಬ್ಲಿಕ್ ಶಾಲೆಗಳನ್ನು ತೆರೆದರೂ ಯಾವುದೇ ಕಾರಣಕ್ಕೂ ಅಂಗನವಾಡಿ ಕಾರ್ಯಕರ್ತರು ಅಥವಾ ಸಹಾಯಕಿಯರನ್ನೂ ಕೆಲಸದಿಂದ ತೆಗೆಯಬಾರದು ಎಂದು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಕುಸಿಯುತ್ತಿದೆ. ಹೀಗಾಗಿ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಅಂಗನವಾಡಿಗಳನ್ನು ಮಾಂಟೆಸ್ಸರಿ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ಮಖ್ಯಮಂತ್ರಿಗಳು ಒಪ್ಪಿಗೆ ನೀಟಿದ್ದಾರೆ . ಅಲ್ಲದೆ,ಈ ಮಕ್ಕಳಿಗೆ ಸರ್ಕಾರದಿಂದಲೇ ಸಮವಸ್ತ್ರ,ಶೂ, ಶಾಲಾ ಬ್ಯಾಗ್ ನೀಡಲಾಗುವುದು ಎಂದು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ 2600 ಕರ್ನಾಟಕ ಪಬ್ಲಿಕ್ ಶಾಲೆ ಶುರು ಮಾಡಲು ಪ್ರಾಥಮಿಕ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಇವುಗಳಲ್ಲಿ ಎಲ್ಕೆಜಿ,ಯುಕೆಜಿ ಶುರುವಾಗುತ್ತಿರುವುದರಿಂದ ಕೆಲಸ ಕಳೆದುಕೊಳ್ಳುವ ಭೀತಿಗೆ ಗುರಿಯಾಗಿರುವುದು ಅಂಗನವಾಡಿ ಕಾರ್ಯಕರ್ತರು ಕಳೆದ ಒಂದು ವಾರದಿಂದ ಕೆಪಿಎಸ್ ಶಾಲೆಗಳ ಪ್ರಾರಂಭವನ್ನು ವಿರೋಧಿಸಿ ಧರಣಿ ನೆಡೆಸಿದ್ದಾರೆ.

ಮುಖ್ಯಮಂತ್ರಿಗಳೊಂದಿಗಿನ ಸಭೆ ಬಳಿಕ ಮಾತನಾಟಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ 2600 ಕೆಪಿಎಸ್ ಶಾಲೆ ತೆರೆಯುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 600 ಪ್ರತ್ಯೇಕ ಕೆಪಿಎಸ್ ಶಾಲೆಗಳನ್ನು ಮಾಡಲು ಆದೇಶ ಆಗಿದೆ.ಇವುಗಳಲ್ಲಿ ಎಲ್ಕೆಜಿ, ಯುಕೆಜಿಯಿಂದ ಪಿಯುವರೆಗೆ ಶಿಕ್ಷಣ ದೊರೆಯಲಿ .ಹೀಗಾಗಿ ಅಂಗನವಾಡಿ ಸಹಾಯಕರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದರು.ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನೆಡೆಸಲಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ತಜ್ಞರ ನೇಮಕಕ್ಕೆ ಸೂಚಿಸಿದ್ದು ಅಲ್ಲಿಯವರೆಗೆ ಪ್ರಸ್ತುತ ಆದೇಶವಾಗಿರುವ ಕೆಪಿಎಸ್ ಶಾಲೆಗಳ ಹೊರತಾಗಿ ಯಾವುದೇ ಹೊಸ ಕೆಪಿಎಸ್ ಶಾಲೆಯನ್ನು ಆರಂಭ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

- Advertisement -

Latest Posts

Don't Miss