ಪ್ರಧಾನಿ ಹುಟ್ಟುಹಬ್ಬದ ಸಲುವಾಗಿ ರಕ್ತದಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ…!

State News:

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ದಾರವಾಡದಲ್ಲಿ ಸೇವಾ ಪಾಕ್ಷಿಕದ ಹೆಸರಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಹಮ್ಮಿಕೊಳ್ಳಲಾಗಿದ್ದು, ಗಿನ್ನಿಸ್ ದಾಖಲೆ ಬರೆಯುವ ಗುರಿ ಹೊಂದಲಾಗಿದೆ ಎನ್ನಲಾಗುತ್ತಿದೆ. ಧಾರವಾಡ ಜಿಲ್ಲೆಯ ಹಲವೆಡೆ ಬಿಜೆಪಿ ಕಾರ್ಯಕರ್ತರು, ಮೋದಿ ಅವರ ಅಭಿಮಾನಿಗಳು ಸ್ವ ಇಚ್ವೆಯಿಂದ ರಕ್ಷದಾನ ಮಾಡುತ್ತಿದ್ದಾರೆ. ಧಾರವಾಡದ ಸೋಮವಾರಪೇಟೆ ಬಳಿ‌ಯ ರಕ್ತದಾನ ಶಿಬಿರ ಕೇಂದ್ರಕ್ಕೆ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿದರು. ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಶ್ರೇಷ್ಠ ನಾಯಕನಿಗೆ ವಿಶೇಷವಾಗಿ ಗೌರವ ಸಲ್ಲಿಸುತ್ತಿರುವ ಬಗ್ಗೆ ಪ್ರಲ್ಹಾದ್ ಜೋಶಿ ಶ್ಲಾಘನೆ ವ್ಯಕ್ತಪಡಿಸಿದರು. ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳಿಗೆ ಸ್ಪೂರ್ತಿ ನೀಡಿದರು.

ಜೋಡೆತ್ತುಗಳ ಮಧ್ಯೆ ಭಿನ್ನಾಬಿಪ್ರಾಯ…! ಸಿದ್ದು ಮೇಲೆ ಡಿಕೆಶಿ ಸಿಟ್ಟೇಕೆ..?!

ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಜಾರಿ ಇಲ್ಲ: ಆರಗ ಜ್ಞಾನೇಂದ್ರ

ಪ್ರಾಣಿಗಳಿಗೆ ಹರಡುತ್ತಿವೆ ವಿಚಿತ್ರ ಸೋಂಕು…! ಬನ್ನೇರುಘಟ್ಟ ಉದ್ಯಾನವನದಲ್ಲಿ 3 ಹುಲಿಗಳ ಸಾವು..!

About The Author