ಪ್ರಧಾನಿ ನರೇಂದ್ರ ಮೋದಿ ಯವರು ಇಂದು ಅರುಣಾಚಲ ಪ್ರದೇಶದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವಾದ ‘ದೋನಿ’ ಪೋಲೋ ವಿಮಾನ ನಿಲ್ದಾಣ’ವನ್ನು ಇಟಾನಗರದ ಹೊಲೊಂಗಿಯಲ್ಲಿ ಉದ್ಘಾಟಿಸಲಿದ್ದಾರೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಧಿಕಾರವು 645 ಕೋಟಿ ಅಂದಾಜು ವೆಚ್ಚದಲ್ಲಿ ದೋನಿ ಪೋಲೋ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಿದೆ.
ವೋಟರ್ ಐಡಿ ಹಗರಣ ವಿವಾದದ ಕುರಿತು ಸಚಿವ ಮಧುಸ್ವಾಮಿ ಪ್ರತಿಕ್ರಿಯೆ
ಮೋದಿಯವರು ವಿಮಾನ ನಿಲ್ದಾಣ ಉದ್ಘಾಟಿಸಿ ಅಲ್ಲಿಂದ ವಾರಣಾಸಿ ಮತ್ತು ಗುಜರಾತ್ ಗೆ ತೆರಳಲಿದ್ದಾರೆ ಎಂದು ರಾಜ್ಯದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2019ರಲ್ಲಿ ಮೋದಿ ಅವರು ಹೊಲೊಂಗಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಅಧಿಕೃತ ಹೇಳಿಕೆಯ ಪ್ರಕಾರ ಹೊಲೊಂಗಿಯಲ್ಲಿ ಟರ್ಮಿನಲ್ ಅನ್ನು ಸುಮಾರು 955 ಕೋಟಿ ರೂಪಾಯಿ ವೆಚ್ಚದಲ್ಲಿ 4100 ಚದರ ಮೀಟರ್ ವಿಸ್ತಿರ್ಣದ್ಲಲಿ ನಿರ್ಮಿಸಲಾಗಿದೆ. ಇದು ಗಂಟೆಗೆ 200 ಪ್ರಯಾಣಿಕರ ಗರಿಷ್ಠ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ
ಸವದತ್ತಿಯ ನವಿಲು ತೀರ್ಥ ಜಲಾಶಯದಲ್ಲಿ ತಾಯಿ ಮತ್ತು ಇಬ್ಬರ ಮಕ್ಕಳ ಶವ ಪತ್ತೆ

