ನರೇಂದ್ರ ಮೋದಿ ಅವ್ರು 3ನೇ ಭಾರಿ ಪ್ರಧಾನಿ ಆದ್ಮೇಲೆ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.. ಹೊಸ ಶಕ್ತಿ ಕೂಡ ಬಂದಂತಾಗಿದೆ. ಇನ್ಮೇಲೆ ಮೋದಿ ಸರ್ಕಾರದಲ್ಲಿ ಯಾವ್ದೇ ಹೊಸ ಕಾನೂನು ಜಾರಿ ಮಾಡ್ಬೇಕಂದ್ರು ನೋ ಟೆನ್ಷನ್.. ಮೋದಿ ಸರ್ಕಾರದಲ್ಲಿ ಇನ್ಮುಂದೆ ಮಾಡಿದ್ದೇ ರೂಲ್ಸ್.
ಲೋಕಸಭೆಯಲ್ಲಿ ಮೋದಿ ಸರ್ಕಾರಕ್ಕೆ ಈಗಾಗಲೇ ಬಹುಮತ ಇದೆ. ಯಾವುದೇ ಕಾಯ್ದೆಗಳು ಜಾರಿ ಆಗ್ಬೇಕಂದ್ರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆ ಆಗ್ಬೇಕು. ಅಲ್ಲಿ ಬಹುಮತ ಬರಬೇಕು. ಲೋಕಸಭೆಯಲ್ಲಿ ಮೆಜಾರಿಟಿ ಮಾರ್ಕ್ 272 ಇದೆ. ಸದ್ಯ ಎನ್ಡಿಎ ಮೈತ್ರಿಕೂಟ 293 ಸದಸ್ಯರನ್ನ ಹೊಂದಿದ್ದು ಬಹುಮತ ಪಡೆದಿದೆ.. ಆದ್ರೆ ಇಷ್ಟು ದಿನ ರಾಜ್ಯಸಭೆಯಲ್ಲಿ ಮೆಜಾರಿಟಿಯೇ ಇರಲಿಲ್ಲ.. ಆದ್ರೆ ನಿನ್ನೆ ರಾಜ್ಯಭೆಯ 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 11 ಮಂದಿ ಎನ್ಡಿಎ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ರಾಜ್ಯಸಭೆ ಲೆಕ್ಕಾಚಾರ ಹೇಗಿದೆ ಅಂತ ನೋಡೋದಾದ್ರೆ, ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245. ಆದ್ರೆ ಅದ್ರಲ್ಲಿ ಸಧ್ಯಕ್ಕೆ 8 ಸ್ಥಾನ ಖಾಲಿ ಇದೆ.
ಹೀಗಾಗಿ ರಾಜ್ಯಸಭಾ ಸದಸ್ಯರ ಸಂಖ್ಯೆ 237ಕ್ಕೆ ಕುಸಿಸಿದೆ. ಅಂದ್ರೆ ಬಹುಮತಕ್ಕೆ 119 ಸ್ಥಾನ ಬೇಕು.. ಸದ್ಯ ಬಿಜೆಪಿಯಲ್ಲಿ 6 ಮಂದಿ ನಾಮನಿರ್ದೇಶನಗೊಂಡ ಸದಸ್ಯರೂ ಸೇರಿ 110 ಸದಸ್ಯರಷ್ಟೇ ಇದ್ರು. ಈಗ 11 ಮಂದಿ ಹೊಸದಾಗಿ ಆಯ್ಕೆ ಆಗಿರೋದ್ರಿಂದ ಎನ್ಡಿಎ ಬಲ 121ಕ್ಕೆ ಏರಿದೆ.. ಹೀಗಾಗಿ ಯಾವ್ದೇ ಹೊಸ ಮಸೂದೆ ಮಂಡನೆ ಆದ್ರೂ ರಾಜ್ಯಸಭೆಯಲ್ಲೂ ಆ ಬಿಲ್ ಅನ್ನ ಈಸಿಯಾಗಿ ಪಾಸ್ ಮಾಡ್ಕೋಬೋದು
ಈ ಲೆಕ್ಕಾಚಾರಗಳನ್ನ ನೋಡಿದ್ರೆ, 3ನೇ ಅವಧಿಯ ಮೋದಿ ಸರ್ಕಾರದಲ್ಲಿ ಇದ್ದ ಎಲ್ಲಾ ಅಡೆ ತಡೆ ನಿವಾರಣೆ ಆದಂತೆ ಆಯ್ತು.. ಕೇಂದ್ರ ಸರ್ಕಾರ ಇನ್ಮುಂದೆ ಏನೇನೆಲ್ಲಾ ಕಾಯ್ದೆಗಳನ್ನ ಜಾರಿಗೊಳಿಸ್ಬೇಕು ಅಂತ ಅನ್ಕೊಂಡಿದ್ರೋ ಅದನ್ನ ಸುಲಭವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಾಸ್ ಮಾಡ್ಕೋಬೋದು… ಒಂದು ದೇಶ, ಒಂದು ಕಾನೂನನ್ನು ಜಾರಿ ಮಾಡ್ಬೇಕು ಅಂತಿದ್ರು. ಇದು ಈ ಬಾರಿ ಸಾಧ್ಯ ಆಗ್ಬೋದು.. ಇದರ ಜೊತೆಗೆ ವಕ್ಫ್ ಬಿಲ್ ಸೇರಿದಂತೆ ಎಲ್ಲಾ ಮಹತ್ವದ ಮಸೂದಿಗಳನ್ನೂ ಮೋದಿ ಸರ್ಕಾರ ಉಭಯ ಸದನಗಳಲ್ಲಿ ಪಾಸ್ ಮಾಡ್ಕೋಬೋದು.. ಸೋ ಇನ್ಮೇಲೆ ಮೋದಿ ಸರ್ಕಾರ ಮಾಡಿದ್ದೇ ರೂಲ್ಸ್..