News: ಮನೆಯಲ್ಲೇ ಅಡುಗೆ ಮಾಡಿ ತಿಂದು ತಿಂದು ಬೋರ್ ಬಂದಾಗ, ನಾವು ಆಚೆಕಡೆ ತಿನ್ನೋ ಮನಸ್ಸು ಮಾಡೋದು ಸಹಜ. ಆದರೆ ನಾವು ಆಚೆಕಡೆ ಇಷ್ಟಪಟ್ಟು ತಿನ್ನೋ ತಿಂಡಿ ನಮ್ಮ ಜೀವಕ್ಕೆ ಕುತ್ತು ತಂದು 4-5 ಸಾವಿರ ರೂಪಾಯಿ ಖರ್ಚು ಮಾಡಿಸಿಬಿಟ್ಟರೆ ಏನು ಗತಿ..?
ಇಂಥದ್ದೇ ಘಟನೆ ಹಿಂದಿ ಕಂಟೆಂಟ್ ಕ್ರಿಯೇಟರ್ ಸೇಜಲ್ ಜೀವನದಲ್ಲಿ ನಡೆದಿದೆ. ಆಕೆ ಬೀದಿಬದಿ ಸಿಗುವ 20 ರೂಪಾಯಿ ವಡಾಪಾವ್ ತಿಂದಿದ್ದಾಳೆ. ಕೆಲ ಸಮಯದ ಬಳಿ ಗಂಟಲು ನೋವು ಶುರುವಾಗಿದೆ. ಮುಖದ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳಾಗಿ ಅಲರ್ಜಿಯಾಗಲು ಶುರುವಾಗಿದೆ.
ಅಲ್ಲದೇ ಏನೂ ತಿನ್ನಲು-ಕುಡಿಯಲು ಆಗದ ಪರಿಸ್ಥಿತಿಯಾಗಿದ್ದು, ಮಾತು ಕೂಡ ಬಂದ್ ಆಗಿದೆ. ಇದೇನಪ್ಪಾ ಸಡನ್ ಆಗಿ ಹಿಂಗೆಲ್ಲಾ ಆಗ್ತಿದೆಯಲಾ ಅಂತಾ ಆಕೆ ವೈದ್ಯರ ಬಳಿ ಹೋಗಿದ್ದಾಳೆ. ಆಗ ವೈದ್ಯರು ಎಕ್ಸ್ರೇ ಎಲ್ಲಾ ತೆಗೆದು, ಚೆಕ್ ಮಾಡಿ, ಗಂಟಲಿನಲ್ಲಿ ಏನೋ ಸಿಲುಕಿದೆ ಎಂದಿದ್ದಾರೆ. ಆಗ ಆಕೆಗೆ ವಡಾಪಾವ್ ತಿನ್ನುವಾಗ, ಏನೋ ಸಿಲುಕಿದಂತಾಗಿದ್ದು, ಅದನ್ನು ಆಕೆ ನಿರ್ಲಕ್ಷಿಸಿದ್ದು ನೆನಪಿಗೆ ಬಂದಿದೆ.
ಸೀಸರ್ ಗಂಟಲಿಗೆ ಹಾಕಿ ಆ ವಸ್ತುವನ್ನು ಆಚೆ ಹಾಕೋದು ಬಿಟ್ಟು ನಿಮ್ಮ ಬಳಿ ಬೇರೆ ಆಯ್ಕೆ ಇಲ್ಲ. ಇಲ್ಲವಾದಲ್ಲಿ ಇನ್ಫೆಕ್ಷನ್, ಸಮಸ್ಯೆ ಎಲ್ಲ ಹೆಚ್ಚಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಆಗ ಗಂಟಲಿಗೆ ಸ್ಪ್ರೇ ಮಾಡಿ, ನೋವಾಗದಂತೆ, ಸೀಸರ್ ಹಾಕಿ, ಆ ವಸ್ತುವನ್ನು ಗಂಟಲಿನಿಂದ ಆಚೆ ತೆಗೆದಿದ್ದಾರೆ.
ಹಾಾಗಾಗಿ ಸೇಜಲ್, ನಾನು ಮಾಡಿದ ತಪ್ಪನ್ನು ನೀವು ಮಾಡಬೇಡಿ. ಏನಾದರೂ ತಿನ್ನುವಾಗ, ನಿರ್ಲಕ್ಷಿಸದೇ, ನೋಡಿಕ“ಂಡು ತಿನ್ನಿ. ಇಲ್ಲವಾದಲ್ಲಿ ನನ್ನ ಹಾಗೆ 4-5 ಸಾವಿರ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಬರಬಹುದು ಎಂದಿದ್ದಾರೆ.




