ಸಮಾಜ ಸುಧಾರಕ ನಾರಾಯಣ ಗುರು ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ದೆಹಲಿಯಲ್ಲಿ ಅವರ ಪ್ರತಿಮೆಗೆ ನಮನ ಸಲ್ಲಿಸಿದ್ರು. ಅಲ್ಲದೇ ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನಾರಾಯಣ ಗುರು ಅವರ ಸಾಮಾಜಿಕ ಕಳಕಳಿಯನ್ನ ಹಾಡಿ ಹೊಗಳಿದ್ದಾರೆ.

ಶ್ರೀ ನಾರಾಯಣ ಗುರು ಅವರ ಮುಂದೆ ನಾನು ತಲೆಬಾಗುವೆ.ಅವರ ಜೀವನ ಹಾಗೂ ಸಮಾಜ ಸೇವೆ ಎಲ್ಲರಿಗೂ ಆದರ್ಶಪ್ರಾಯವಾದುದು.
ಮಹಿಳೆಯರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕಾಗಿ ಶ್ರೀ ನಾರಾಯಣ ಗುರು ಅವರು ಶ್ರಮಿಸಿದ್ದರು.ಶ್ರೀ ನಾರಾಯಣ ಗುರು ಅವರ ಆದರ್ಶಗಳು ಭಾರತಕ್ಕೆ ಶಕ್ತಿ ತುಂಬಿದೆ ಅಂತಾ ಬರೆದುಕೊಂಡಿದ್ದಾರೆ.




