Sunday, October 5, 2025

Latest Posts

ಮೋದಿ ಶಾಕ್‌ ಟ್ರೀಟ್‌ಮೆಂಟ್‌.. ದಕ್ಷಿಣ ಕೊರಿಯಾಗೆ ಟ್ರಂಪ್‌!

- Advertisement -

ಚೀನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ಬಳಿಕ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಚಲಿತರಾದಂತೆ ಕಾಣಿಸ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ, ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತವಾಗಿ ಕಾಣಿಸಿಕೊಂಡಿದ್ರು.

ಇದು ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿಸಿದ್ದ ಟ್ರಂಪ್‌ರನ್ನೇ ಕೆಂಗೆಡಿಸಿತ್ತು. ಬಳಿಕ ನಾನು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ. ಭಾರತ–ಅಮೆರಿಕಾ ವಿಶೇಷ ಸಂಬಂಧ ಹೊಂದಿವೆ. ಇದು ತಾತ್ಕಾಲಿಕ ಪರಿಸ್ಥಿತಿ ಮಾತ್ರ ಎಂದು ಟ್ರಂಪ್ ಹೇಳಿದ್ದಾರೆ.

ಈ ಬೆನ್ನಲ್ಲೇ, ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ದಕ್ಷಿಣ ಕೊರಿಯಾಗೆ ತೆರಳಲು, ಡೊನಾಲ್ಟ್‌ ಟ್ರಂಪ್‌ ಸಿದ್ಧತೆ ನಡೆಸಿದ್ದಾರೆ. ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ವೇಳೆ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ ಎನ್ನಲಾಗಿದೆ. ಇನ್ನು, ದಕ್ಷಿಣ ಕೊರಿಯಾ ಪ್ರವಾಸದ ಸಮಯದಲ್ಲೇ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಬಹುದು ಎನ್ನಲಾಗಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್, ಕಳೆದ ವಾರ ಟ್ರಂಪ್ ಅವರಿಗೆ ಆಹ್ವಾನ ನೀಡಿದ್ರು. ಈ ವೇಳೆ ಆಹ್ವಾನ ಸ್ವೀಕರಿಸಿದ ಟ್ರಂಪ್‌, ಕಿಮ್ ಜಾಂಗ್ ಉನ್ ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರಂತೆ.

- Advertisement -

Latest Posts

Don't Miss