Thursday, June 13, 2024

Latest Posts

ಇದು ಅತ್ಯಂತ ರೋಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿದ್ದು, ನೆನಪಿನಲ್ಲಿ ಉಳಿಯುತ್ತದೆ : ಅರ್ಜೆಂಟೀನಾ ಗೆಲುವಿಗೆ ಅಭಿನಂದಿಸಿದ ಪ್ರಧಾನಿ ಮೋದಿ

- Advertisement -

ಫುಟ್ಬಾಲ್ ವಿಶ್ವಕಪ್‌ನಲ್ಲಿ ಜಯಗಳಿಸಿದ ಅರ್ಜೆಂಟೀನಾವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದು ಅತ್ಯಂತ ರೋಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿದ್ದು, ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. #FIFAWorldCup ಚಾಂಪಿಯನ್ಸ್ ಕಿರೀಟವನ್ನು ಅಲಂಕರಿಸಿದ ಅರ್ಜೆಂಟೀನಾಗೆ ಅಭಿನಂದನೆಗಳು! ಟೂರ್ನಿಯುದ್ದಕ್ಕೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಮಹಾನ್ ಗೆಲುವಿಗಾಗಿ ಸಂತೋಷಪಟ್ಟಿದ್ದಾರೆ ಎಂದು ತಿಳಿಸಿದರು.

21 ವರ್ಷಗಳ ನಂತರ ಮಿಸೆಸ್ ವರ್ಲ್ಡ್ ಕಿರೀಟ ಭಾರತಕ್ಕೆ ಮರಳಿ ತಂದ ಸರ್ಗಮ್ ಕೌಶಲ್

ಮತ್ತೊಂದು ಟ್ವೀಟ್‌ನಲ್ಲಿ, ಫ್ರಾನ್ಸ್ ಅನ್ನು ಉಲ್ಲೇಖಿಸಿ, ಅವರು #FIFAWorldCup ನಲ್ಲಿ ಉತ್ಸಾಹಭರಿತ ಪ್ರದರ್ಶನಕ್ಕಾಗಿ ಫ್ರಾನ್ಸ್ ಗೆ ಅಭಿನಂದನೆಗಳು ಎಂದು ಬರೆದಿದ್ದಾರೆ. ಅವರು ಫೈನಲ್‌ಗೆ ಹೋಗುವ ದಾರಿಯಲ್ಲಿ ತಮ್ಮ ಕೌಶಲ್ಯ ಮತ್ತು ಕ್ರೀಡಾ ಮನೋಭಾವದಿಂದ ಫುಟ್‌ಬಾಲ್ ಅಭಿಮಾನಿಗಳನ್ನು ಸಂತೋಷಪಡಿಸಿದರು ಎಂದರು.

ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಸಂಗೊಳ್ಳಿ ರಾಯಣ್ಣ ವೃತ್ತ ತೆರವು

ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಭಾನುವಾರ ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ 2022 ರ ಸೂಪರ್ ರೋಚಕ ಫೈನಲ್ ಅನ್ನು ಅರ್ಜೆಂಟೀನಾ ಗೆದ್ದಿದೆ. ಪಂದ್ಯದಲ್ಲಿ ಕಳೆದ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ನಲ್ಲಿ ಫ್ರಾನ್ಸ್ ತಂಡವನ್ನು 4–2 ಗೋಲುಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ ಆಯಿತು.

ಕಾಮಾಕ್ಯ ದೇವಿಯ ಋತುಚಕ್ರದ ದಿನದಲ್ಲಿ ಬ್ರಹ್ಮಪುತ್ರ ನದಿಯ ಬಣ್ಣ ಬದಲಾಗಲು ಕಾರಣವೇನು..?

ನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ? : ಬಳಕೆದಾರರಿಗೆ ನಿರ್ಧರಿಸಲು ಹೇಳಿದ ಎಲಾನ್ ಮಸ್ಕ್

- Advertisement -

Latest Posts

Don't Miss