ಏನಿದು ಅಣುಗಳ ಉಸಿರಾಟ..?!

Special News:

ಪ್ರಾಥಮಿಕ ಪಾಠಕ್ಕೆ ಮತ್ತೆ ಮಾರು ಹೋಯಿತಾ ಜಗತ್ತು..?!ಹೌದು ಮತ್ತೆ ವಿಜ್ಞಾನ ಲೋಕದಲ್ಲಿ ಶುರುವಾಗಿದೆ ಅಣುಗಳ ಚರ್ಚೆ. ಶಾಲೆಯಲ್ಲಿ ಕಳಿತ  ಪಾಠ ಮತ್ತೆ ಮರುಕಳಿಸಿದೆ. ಹೊತ್ತಗೆ  ಹೊತ್ತು ಕ್ಲಾಸಲ್ಲಿ ಕೂತು ಕರಿಹಳಗೆಯಲ್ಲಿ  ಪ್ರೋಟೋನ್ ನ್ಯೂಟ್ರೋನ್ ಎಂದಾಗಲೇ ಶುರುವಾಗಿತ್ತು ಕುತೂಹಲದ ಕಹಳೆ.ಇದೀಗ ಮತ್ತೆ ಪ್ರಪಂಚದ ಕಣ್ಣು ಅದೇ ಅಣುಗಳತ್ತ. ಅದು ಪ್ರಾರಂಭದ ಚರ್ಚೆಯೇ ಅಣುಗಳ ಉಸಿರಾಟದ ಬಗ್ಗೆ.. ಹಾಗಿದ್ರೆ ಏನಿದು ಅಣುಗಳ  ಉಸಿರಾಟ ಅಷ್ಟಕ್ಕೂ ಅಣುಗಳಿಗೂ ಜೀವ ಬಂದೇ ಬಿಡ್ತಾ..?! ಇವೆಲ್ಲಾ ಕೌತುಕಕ್ಕೆ ಇಲ್ಲಿದೆ ಉತ್ತರ.

ಪ್ರಪಂಚದಲ್ಲಿ  ತರಂಗಗಳ ಬಳಕೆ ಬಗ್ಗೆ ನಮಗೇ ಗೊತ್ತೇ ಇದೇ. ಅದರಲ್ಲೂ ಇದು 5ಜೀ ಯುಗ, ಈ ಯಗದಲ್ಲಂತೂ ಮನುಷ್ಯರಿಗಿಂತ ಮೆಷಿನ್ ಗಳ ಮಾತೇ ಅಧಿಕ. ಮಾನವ  ಸಂಕುಲವನ್ನೇ ನಾಚಿಸುವಂತೆ ಮಾಡಿರೋ ಮೆಷಿನ್ ಗಳ ಕಾರ್ಯಾಚರಣೆಗೆ  ಈ ಅಣುಗಳ ಪಾತ್ರ ಬಹಳನೇ ಮುಖ್ಯ. ಅಷ್ಟಕ್ಕೂ ಅಣುಗಳ  ಚಲನೆ ಬಗ್ಗೆ ಈಗಾಗಲೇ ತಿಳಿದ ವಿಚಾರ. ಆದರೆ ಅಣುಗಳ ಘರ್ಷಣೆ  ಬಗೆಗೆ ಈಗ ಶುರುವಾಗಿದೆ ಮಾತು. https://karnatakatv.net/bmtc-buses-electricbuses-congressparty/

ಹೌದು  ಈಗಾಗಲೇ ಅಣುಗಳು ಚಲಿಸುವ ವಿಚಾರಗಳ  ಬಗ್ಗೆ ವಿಜ್ಞಾನಿಗಳು ಬಹಳಷ್ಟು ಮಾಹಿತಿ ನೀಡಿದ್ದಾರೆ. ಈಗ ಅಣುಗಳ ಪದರಗಳ ನಡುವಿನ ಘರ್ಷಣೆ ಕುರಿತಾಗಿ  ಚರ್ಚೆ ಆರಂಭವಾಗಿದೆ. ಅಣುಗಳು ಪದರಗಳನ್ನು ಹೊಂದಿದ್ದು ನಿರಂತರವಾಗಿ ಇವುಗಳ ಮಧ್ಯೆ ಅತಿ ಸೂಕ್ಷ್ಮವಾದ ಘರ್ಷಣೆಯೊಂದು ನರಂತರವಾಗಿರುತ್ತಂತೆ. ಈ ಘರ್ಷಣೆ ಗೋಚರಿಸುವುದು. ಹಾಗೆಯೇ ಇವುಗಳು ಹಿಗ್ಗುವ ಹಾಗು ಕುಗ್ಗುವ ಪ್ರಕ್ರಿಯೆಯನ್ನೂ ಹೊಂದಿರುತ್ತದೆ. ಈ ಚಲನೆಯು ಮನುಷ್ಯನ ಶ್ವಾಸಕೋಶದ ಉಸಿರಾಟದ ಪ್ರಕ್ರಿಯೆಯನ್ನು ಹೋಲುವುದರಿಂದ ಈ ಪ್ರಕ್ರಿಯೆಗೆ ವಿಜ್ಞಾನಿಗಳು ಇಟ್ಟಿರುವ ಹೆಸರೇ ಅಣುಗಳ ಉಸಿರಾಟ. ಆದ್ದರಿಂದಲೇ ಇದೀಗ ಪ್ರಪಂಚದಾದ್ಯಂತ ಅಣುಗಳ  ಉಸಿರಾಟದ ವಿಚಾರ ತಲೆಎತ್ತಿವೆ. ಅಮೇರಿಕಾದ ವಾಷಿಂಗ್ಟನ್  ವಿಶ್ವವಿದ್ಯಾಲಯದ ವಿಜ್ಞಾನಿ ಮೊಲೀ ಅವರು ಸಂಶೋಧನೆ ನಡೆಸಿದ್ದಾರೆ.

ಎಕ್ಸಪ್ರೆಸ್ ಹೈವೆ ಯಲ್ಲಿ ಹೆಚ್ಚಿದ ಅಪಘಾತ : ವೇಗ ಮಿತಿ ಇಳಿಕೆ..!

ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ವರುಣಾರ್ಭಟ

ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ -ರೆಡ್ ಅಲರ್ಟ್ ಘೋಷಣೆ

About The Author