Wednesday, August 20, 2025

Latest Posts

Money Knowledge: FINANCIAL EDUCATION ಎಷ್ಟು ಮುಖ್ಯ..?

- Advertisement -

Financial Education: ಪ್ರಪಂಚದಲ್ಲಿ ಹಣದುಬ್ಬರ ಹೇಗೆ ಹೆಚ್ಚಾಗುತ್ತಿದೆ ಅನ್ನೋದು ನೀವ್ಯಾರು ಅಂದಾಜಿಸಲು ಸಾಧ್ಯವೇ ಇಲ್ಲ ಅಂತಾರೆ ಫೈನಾನ್ಸ್ ಎಕ್ಸಪರ್ಟ್ ಹೇಮಂತ್ ಕುಮಾರ್. ಅವರು ಜನರಿಗೆ ಫೈನಾನ್ಶಿಲ್ ಎಜುಕೇಷನ್ ಎಷ್ಟು ಮುಖ್ಯ ಅಂತಾ ವಿವರಿಸಿದ್ದಾರೆ.

ನಮಗೆ ಹಣಕಾಸಿನ ಉಪಯೋಗದ ಬಗ್ಗೆ ಅರಿವಿಲ್ಲದಿದ್ದರೆ ಏನೇನಾಗಬಹುದು ಅನ್ನೋದನ್ನು ಹೇಮಂತ್ ಅವರು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಹಿಂದಿಯಲ್ಲಿ ಬರುವ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಸುಶೀಲ್ ಕುಮಾರ್ ಎಂಬ ಶಿಕ್ಷಕ 5 ಕೋಟಿ ರೂಪಾಯಿ ಗೆದ್ದಿದ್ದರು. ಆದರೆ ಕೆಲ ವರ್ಷದ ಬಳಿಕ ಅವರ ಸಂದರ್ಶನ ಮಾಡಿದಾಗ, ಅವರು ಈ ಮುಂಚಿನ ಸ್ಥಿತಿಗೆ ಬಂದು ತಲುಪಿದ್ದು, ಜೀವನದಲ್ಲಿ ಹಲವು ಸಮಸ್ಯೆಗಳನ್ನು ತಂದುಕ“ಂಡಿದ್ದರು. ಅವರ ಈ ಸ್ಥಿತಿ ನೋಡಿ, ಅವರ ಪತ್ನಿ ಕೂಡ ಅವರಿಂದ ದೂರವಾಗಿದ್ದಾರೆ.

ಇದಕ್ಕೆಲ್ಲ ಕಾರಣವೇನು ಅಂದ್ರೆ, ಆ ವ್ಯಕ್ತಿಗೆ ಹಣಕಾಸಿನ ಬಗ್ಗೆ ಅರಿವಿರುವುದಿಲ್ಲದಿರುವುದು. ಹಾಗಾಗಿ ನೀವು ಓರ್ವ ಹಣಕಾಸು ತಜ್ಞರ ಸಲಹೆ ಪಡೆದೇ ಹಣ ಹೂಡಿಕೆ, ಹಣದ ಉಪಯೋಗ ಮಾಡಬೇಕು ಅಂತಾರೆ ಹೇಮಂತ್. ಏಕೆದಂರೆ, ಮನೆಕಟ್ಟಲು ಎಂಜಿನಿಯರ್ ಬೇಕು, ಆರೋಗ್ಯ ಹಾಳಾದಾಗ ವೈದ್ಯರು ಬೇಕು, ಅದೇ ರೀತಿ ಹಣಕಾಸಿನ ವಿಷಯದಲ್ಲೂ ತಜ್ಞರ ಸಲಹೆ ಬೇಕು. ಇಲ್ಲವಾದಲ್ಲಿ, ಹಣ ಹಾಳಾಗಿ, ಯಥಾಸ್ಥಿತಿಗೆ ಬರಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss