Web News: ಇಂದಿನ ಕಾಲದಲ್ಲಿ ದುಡ್ಡು ಎಷ್ಟು ಮುಖ್ಯ ಅಂದ್ರೆ, 1 ಮಗು ಜನಿಸಿದಾಗಿನಿಂದಲೂ, ಅದು ವಯಸ್ಸಾಗಿ ಸಾಯುವವರೆಗೂ ಹಣ ಬೇಕು. ಜನಿಸಿದಾಗ ಆಸ್ಪತ್ರೆ ಖರ್ಚು, ಶಾಲೆಗೆ ಹೋಗಲು ಶುರು ಮಾಡಿದಾಗ, ಅದರ ಖರ್ಚು, ವಯಸ್ಸಿಗೆ ಬಂದಾಗ ಮದುವೆ ಖರ್ಚು, ಬಳಿಕ ಅವರ ಮಕ್ಕಳ ಖರ್ಚು, ಎಲ್ಲ ಮುಗಿಸಿ ಆಸ್ಪತ್ರೆ ಸೇರಿದಾಗ ಆಸ್ಪತ್ರೆ ಖರ್ಚು, ಸತ್ತ ಮೇಲೆ ಅಂತ್ಯಸಂಸ್ಕಾರದಿಂದ 13ನೇ ದಿನದ ತಿಥಿ ಖರ್ಚು. ಹೀಗೆ ಜನನದಿಂದ ಮರಣದವರೆಗೂ ಖರ್ಚೇ ಖರ್ಚು.
ಹಾಗಾಗಿ ಖರ್ಚು ಮಾಡಲು ದುಡ್ಡೂ ಬೇಕಲ್ಲವೇ..? ಇನ್ನ“ಬ್ಬರಿಗೆ ಭಾರವಾಗಿ ನಿಲ್ಲಬಾರದಾದರೆ, ನಿಮ್ಮ ಹಣವನ್ನು ಇದ್ದಲ್ಲೇ ಇರಿಸುವ ಬದಲು, ಹೂಡಿಕೆ ಮಾಡುವುದನ್ನು ಕಲಿಯಿರಿ. ಹಾಗಾದ್ರೆ ಹೇಗೆ ಹೂಡಿಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಾವು ನಮ್ಮ ಆರೋಗ್ಯದ ಮೇಲೆ ಪ್ರಥಮ ಹೂಡಿಕೆ ಮಾಡಬೇಕು. ಅದಕ್ಕಾಗಿ ನಾವು ಹೆಲ್ತ್ ಇನ್ಶೂರೆನ್ಸ್ ತೆಗೆದುಕ“ಳ್ಳುವುದು ತುಂಬಾ ಮುಖ್ಯ. ನೀವು ಎಷ್ಟಟೇ ಸೇವಿಂಗ್ಸ್ ಮಾಡಿದ್ರೂ, ಕೂಡಿಟ್ಟ ನಿಮ್ಮ ಹಣ ಖರ್ಚಾಗಲು ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಬರುವುದೇ ಸಾಕು. ಇಡೀ ಜೀವಮಾನದ ಸೇವಿಂಗ್ಸ್ ಖಾಲಿ ಖಾಲಿ. ಹಾಗಾಗಿ ಹೆಲ್ಸ್ ಇನ್ಶೂರೆನ್ಸ್ ಮಾಡಿಸಿಬಿಡಿ.
ಇನ್ನು ಟರ್ಮ್ ಇನ್ಶೂರೆನ್ಸ್. ನೀವು ಹೋದ ಮೇಲೆ ನಿಮ್ಮ ಪತ್ನಿ ಮಕ್ಕಳ ಖರ್ಚಿಗಾಗಿ ಸಮಸ್ಯೆ ಆಗಬಾರದು ಅಂದ್ರೆ, ಅದಕ್ಕಾಗಿ ನೀವು ಟರ್ಮ್ ಇನ್ಶೂರೆನ್ಸ್ ಮಾಡಿಸಲೇಬೇಕು. ಇದರ ಜತೆಗೆ ನೀವು ರಿಟೈರ್‌ಮೆಂಟ್ ಪ್ಲಾನ್, ಎಮರ್ಜೆನ್ಸಿ ಫಂಡ್ ಹೀಗೆ ಹಲವು ಮುನ್ನೆಚ್ಚರಿಕೆಗಳನ್ನು ನೀವು ತೆಗೆದುಕ“ಳ್ಳಬೇಕಾಗುತ್ತದೆ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.