Money Knowledge: ನಾವು ಈಗಾಗಲೇ ನಿಮಗೆ ಹಣ ಉಳಿತಾಯ ಮಾಡುವ ಬಗ್ಗೆ, ಹೂಡಿಕೆ ಮಾಡುವ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಹಣದಿಂದ ಹಣ ದುಡಿಯೋದು ಹೇಗೆ ಅನ್ನೋ ಬಗ್ಗೆ ಹಣಕಾಸು ತಜ್ಞರಾಗಿರುವ ಹೇಮಂತ್ ಅವರು ವಿವರಿಸಿದ್ದಾರೆ.
ಹೇಮಂತ್ ಅವರು ಹೇಳುವ ಪ್ರಕಾರ, ವಿದ್ಯೆ ಕಲಿಯಲು ಶಿಕ್ಷಕರ ಬಳಿ, ಚಿಕಿತ್ಸೆಗಾಗಿ ವೈದ್ಯರ ಬಳಿ, ವಾದ ಗೆಲ್ಲಲು ಲಾಯರ್ ಬಳಿ ಹೀಗೆ ಬೇರೆ ಬೇರೆ ಕೆಲಸಕ್ಕೆ ಅದರ ತಜ್ಞರ ಬಳಿ ಹೋಗುತ್ತೇವೋ, ಅದೇ ರೀತಿ ಹಣಕಾಸಿನ ಉಪಯೋಗ ಮಾಡಿಕ“ಳ್ಳಲು ನಾವು ಹಣಕಾಸು ತಜ್ಞರ ಬಳಿ ಹೋಗಬೇಕು. ಮನೆಯಲ್ಲೇ ಹಣ ಹೇಗೆ ಬಳಸಬೇಕು ಎಂದು ನಿರ್ಧರಿಸುವುದಕ್ಕಿಂತ, ಹಣ ಹೂಡಿಕೆ ಬಗ್ಗೆ ತಜ್ಞರ ಬಳಿ ಸಲಹೆ ಕೇಳಿದರೆ, ಹಣದಿಂದ ಹಣ ಹೇಗೆ ದುಡಿಯಬೇಕು ಅನ್ನೋ ಬಗ್ಗೆ ಅವರು ವಿವರಿಸುತ್ತಾರೆ.
ಏಕೆಂದರೆ ಹಣಕಾಸು ತಜ್ಞರಿಗೆ ಎಲ್ಲಿ ಹಣ ಹೂಡಿಕೆ ಮಾಡಿದರೆ, ಹೇಗೆ ಹಣ ಡಬಲ್ ಆಗುತ್ತದೆ. ಯಾವ ಕಡೆ ಹಣ ಹೂಡಿದರೆ, ಕಳೆದುಕ“ಳ್ಳುವ ಸಾಧ್ಯತೆ ಹೆಚ್ಚು ಅನ್ನೋ ಬಗ್ಗೆ ಮಾಹಿತಿ ಇರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.