Political News: ಕೇಂದ್ರ ಸರ್ಕಾರವು ನಮ್ಮ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಕ್ಕಿಂತ ನಮಗೆ ನೀಡುತ್ತಿರುವ ಅನುದಾನ ಕಡಿಮೆ ಇದ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಬರಬೇಕಿದ್ದ ಹಲವು ಪ್ರಾಜೆಕ್ಟ್ಗಳನ್ನು ನೇರವಾಗಿ ಗುಜರಾತ್ಗೆ ಬನ್ನಿ ಎಂದು ಹೇಳಿದ್ದೂ ನಮಗೆ ತಿಳಿದಿದೆ. ಅಲ್ಲದೇ ಅನೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣವೇ ನೀಡಿಲ್ಲ. ಆಯೋಗದಲ್ಲಿ ಬಂದಿರುವ ಯೋಜನೇಗೂ ಹಣವನ್ನು ನೀಡಿಲ್ಲವೆಂದು ಸಚಿವರು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳನ್ನು ತಾಯಿ ಹೃದಯದಿಂದ ಸಮಾನವಾಗಿ ಕಾಣಬೇಕಾದ್ದು ಸಾಂವಿಧಾನಿಕ ಆಶಯ, ಆದರೆ ಕರ್ನಾಟಕದ ವಿಷಯದಲ್ಲಿ ಇದು ಮರೀಚಿಕೆಯಾಗಿದೆ. ಬಜೆಟ್ನಲ್ಲಿ ಘೋಷಿಸಿದ ಅನುದಾನ ಬಿಡುಗಡೆ ಮಾಡಿಲ್ಲ ಮತ್ತು ತೆರಿಗೆ ಪಾಲಿನಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಇದರ ಜೊತೆಗೆ, ಕರ್ನಾಟಕದತ್ತ ಆಸಕ್ತಿ ತೋರುವ ಕೈಗಾರಿಕೋದ್ಯಮಿಗಳನ್ನು ನೇರವಾಗಿ ಗುಜರಾತ್ಗೆ ಆಹ್ವಾನಿಸುವ ಮೂಲಕ ರಾಜ್ಯದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯಯುತ ಹಕ್ಕುಗಳನ್ನು ವಂಚಿಸುತ್ತಿರುವುದು ಅತ್ಯಂತ ಖೇದನೀಯ ಸಂಗತಿಯಾಗಿದೆ ಎಂದು ದಿನೇಶ್ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




