ಯ್ಯೂಟೂಬರ್‌ಗೆ ಜಾಸ್ತಿ ರೆಸ್ಪೆಕ್ಟ್‌, ಡೆವೆಲಪ್ಡ್‌ ಲೈಫ್‌ಗೆ ಚೀನಾ ಬೆಸ್ಟ್‌ | Saahil Podcast

Podcast: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸ ಮತ್ತು ಚೀನಾ ದೇಶದ ಬಗ್ಗೆ ಮಾತನಾಡಿದ್ದಾರೆ.

ಈಗಾಗಲೇ ಚೀನಾದಲ್ಲಿ ನೆಲೆಸಿರುವ ಸಾಹಿಲ್, ಬೇರೆ ಯಾರಾದ್ರೂ ಚೀನಾ ದೇಶಕ್ಕೆ ಹೋಗಿ, ಭವಿಷ್ಯ ರೂಪಿಸಿಕ“ಳ್ಳುವುದಾಗಿದ್ದಲ್ಲಿ, ಕೆಲವು ಟಿಪ್ಸ್ ನೀಡಿದ್ದಾರೆ. ಓದಕ್ಕೆ ಬರುವವರಿಗೆ ಉತ್ತಮ ಅವಕಾಶವಿದೆ. ಏಕೆಂದರೆ ಚೀನಾದಲ್ಲಿ ಟಾಪ್ ಯುನಿವರ್ಸಿಟಿಗಳಿದೆ. ಆದರೆ ಸುಮ್ಮನೆ ಬರಬೇಡಿ. ಆ ಬಗ್ಗೆ ತಿಳಿದು ಬನ್ನಿ ಅಂತಾರೆ ಸಾಹಿಲ್.

ಏಕೆಂದರೆ, ಅಲ್ಲಿ ಭಾಷೆ ಕಲಿಯಲು ತುಂಬಾ ಕಷ್ಟವಿದೆ. ಆಹಾರ ಸಮಸ್ಯೆ ಕೂಡ ಆಗಬಹುದು. ಅಲ್ಲದೇ, ಕೆಲ ಏಜೆನ್ಸಿಗಳು ಮೋಸ ಮಾಡ್ತಾರೆ. ಅಂಥವರನ್ನು ದಾಟಿ ಬರುವ ಧೈರ್ಯವಿದ್ದಲ್ಲಿ ಖಂಡಿತ ಬನ್ನಿ ಅಂತಾರೆ ಸಾಹಿಲ್.

ಇನ್ನು ಚೈನಾದಲ್ಲಿ ಯೂಟ್ಯೂಬರ್‌ಗಳಿಗೆ ತುಂಬಾ ಗೌರವವಿದೆ. ಏಕೆಂದರೆ, ಚೀನಾ ದೇಶದ ಜನರಿಗೆ ತಮ್ಮ ದೇಶದ ಬಗ್ಗೆ ಬೇರೆ ದೇಶದವರು ತಿಳಿಯಲಿ ಎಂಬ ಆಸೆ ಇರುತ್ತದೆ. ಹಾಗಾಗಿ ಚೀನಾದ ಯಾವುದೇ ಕಾರ್ಯಕ್ರಮ, ರೆಸ್ಟೋರೆಂಟ್ ಸೇರಿ ನೀವು ಯಾವುದೇ ಸ್ಥಳಗಳನ್ನು ಯೂಟ್ಯೂಬ್‌ ಮೂಲಕ ತೋರಿಸುತ್ತೀರಿ ಎಂದಲ್ಲಿ, ಚೀನಾದವರು ಗೌರವಿಸಿ, ಬೆಂಬಲಿಸುತ್ತಾರೆ ಅಂತಾರೆ ಸಾಹಿಲ್. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author