Indonesia News: ಇಂಡೋನೇಷಿಯಾದಲ್ಲಿ ಭೂ ಕುಸಿತವಾಗಿದೆ. ಚಿನ್ನದ ಗಣಿ ಕುಸಿದು 15 ಜನ ಸಾವನ್ನಪ್ಪಿದ್ದಾರೆ. ಘಟನೆ ನಡೆಯುವಾಗ 25 ಜನ ಚಿನ್ನದ ಗಣಿ ಅಗಿಯುತ್ತಿದ್ದು, 15 ಜನ ಸಾವಿಗೀಡಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.
ಇಂಡೋನೇಷಿಯಾದ ಸುಮಾತ್ರಾ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ಮರಣ ಹೊಂದಿದ 15 ಜನರಲ್ಲಿ ಇನ್ನು 7 ಜನರ ಮೃತದೇಹ ಸಿಗಲಿಲ್ಲ. ಭೂಕುಸಿತದಲ್ಲಿ ಇವರೆಲ್ಲ ಸಿಕ್ಕಿಹಾಕಿಕೊಂಡಿದ್ದು, ಇವರನ್ನು ಹುಡುಕಿ ತೆಗೆಯಲು ಸ್ಥಳೀಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಜೋರಾಗಿ ಮಳೆ ಬಂದ ಬಳಿಕ ಭೂಕುಸಿತ ಸಂಭವಿಸಿದ್ದು, ಈ ಸ್ಥಳಕ್ಕೆ ಹೋಗಲು, 8 ಗಂಟೆಗಳ ಕಾಲ ಚಾರಣ ಮಾಡಬೇಕು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಚಿನ್ನದ ಗಣಿಗಳೆಲ್ಲ ಅಧಿಕಾರಿಗಳು, ಜನರು ತಲುಪಲು ಕಷ್ಟವಿರುವ ಜಾಗದಲ್ಲಿ ಇದ್ದು, ಪದೇ ಪದೇ ಭೂಕುಸಿತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಈ ಮೊದಲು ಇಂಡೋನೇಷಿಯಾದಲ್ಲಿ ಚಿನ್ನದ ಗಣಿ ಕುಸಿದು 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.