Thursday, March 13, 2025

Latest Posts

ಟರ್ಕಿ ಭೂಕಂಪನ; 20 ಸಾವಿರಕ್ಕೂ ಅಧಿಕ ಮಂದಿ ಬಲಿ?

- Advertisement -

Turkey-syria-Earthquakes

ಬೆಂಗಳೂರು(ಫೆ.7): ನೈಸರ್ಗಿಕ ವಿಕೋಪದಂದಾಗಿ ಟರ್ಕಿ, ಸಿರಿಯಾ ದೇಶಗಳಲ್ಲಿ ಎಂದೂ ಕಂಡು ಕೇಳರಿಯದಂತಹ ಮಹಾ ದುರಂತ ಸಂಭವಿಸಿದ್ದು, ಇಡೀ ಜಗತ್ತೇ ಒಮ್ಮೆ ಸಿರಿಯಾದತ್ತ ಗಮನ ಹರಿಸುವಂತಹ ಸಂದರ್ಭ ಶುರುವಾಗಿದೆ. ಈ ದೇಶದಲ್ಲಿ ಇದೀಗ ಜನರ ಆಕ್ರಂದನ ಮುಗಿಲುಮುಟ್ಟಿದ್ದು, ಇಲ್ಲಿನ ಜನ ಕಣ್ಣೀರಿನಲ್ಲಿ ಮುಳುಗಿ ಹೋಗಿದ್ದಾರೆ. ಯಾರಾದರೂ ಸಹಾಯಹಸ್ತ ಚಾಚುತ್ತಾರೋ ಎಂಬ ಆರ್ತನಾದ ಈ ಕೇಳಿಬರುತ್ತಿದೆ. ಇದೀಗ ಈ ದೇಶಗಳಲ್ಲಿ ಭೂಕಂಪನಕ್ಕೆ ಬಲಿಯಾದ ಜನರ ಸಂಖ್ಯೆ 20 ಸಾವಿರದಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಈ ದೇಶದಲ್ಲಿರುವ ಜನರು ಮನೆಯೊಳಗೆ ಇರಲು ಅಸಾಧ್ಯವಾಗುವ ಸ್ಥಿತಿ ಉಂಟಾಗಿದ್ದು, ಭಯಭೀತಿಯಿಂದ ಇಲ್ಲಿನ ಜನ ನಲುಗಿ ಹೋಗಿದ್ದಾರೆ. ನೋಡ ನೋಡುತ್ತಲೇ ಕುಸಿಯುತ್ತಿದ್ದ ಕಟ್ಟಡಗಳನ್ನು ನೋಡಿದರೆ, ಜನರ ಪರಿಸ್ಥಿತಿ ಭೀಕರವಾಗಿದೆ. ಕಟ್ಟಡಗಳ ಅವಶೇಷಗಳ ಅಡಿ ಹೂತು ಹೋಗಿರುವ ಜನರನ್ನು ನೋಡಿದರೆ, ಮನಕಲುಕುವಂತಾಗುತ್ತದೆ. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಜನರಿಗೆ ನೆರವಾಗುವತ್ತ ಮುಂದಾಗಿದ್ದಾರೆ.

ಈ ಬಾರಿ 5.9 ರಷ್ಟು ಕಂಪನ

ಮಂಗಳವಾರ ರಾತ್ರಿ ಥರಗುಟ್ಟುವ ಚಳಿಯಲ್ಲಿ ರಕ್ಷಣಾ ಕಾರ್ಯಪಡೆಗಳು ಬರಿಗೈಯಲ್ಲಿ ಅವಶೇಷಗಳನ್ನು ತೆರವುಗೊಳಿಸಿ ಬದುಕಿರುವವರಿಗಾಗಿ ಹುಡುಕಾಟ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವಾಗಲೇ ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿನ ಒಟ್ಟು ಸಾವಿನ ಸಂಖ್ಯೆ 4,365 ದಾಟಿದೆ. ಟರ್ಕಿಯಲ್ಲಿ ಮೊದಲ ಭೂಕಂಪನ ರಿಕ್ಟರ್ ಮಾಪನದಲ್ಲಿ 7.8ರಷ್ಟು ದಾಖಲಾಗಿತ್ತು. ಎರಡನೇ ಕಂಪನ 7.6 ತೀವ್ರತೆಯದ್ದಾಗಿದ್ದರೆ, ಮೂರನೆಯದ್ದು 6.0 ತೀವ್ರತೆ ಹೊಂದಿತ್ತು. ಈಗ ನಾಲ್ಕನೇ ಕಂಪನ 5.9 ರಷ್ಟು ದಾಖಲಾಗಿದೆ.

ಟರ್ಕಿ ದೇಶದಲ್ಲಿ ಸಾವಿನ ಸಂಖ್ಯೆ ಇದೀಗ 2,921 ದಾಖಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಒಟ್ಟಾರೆ ಎರಡೂ ದೇಶಗಳಲ್ಲಿನ ಮರಣ ಪ್ರಮಾಣ 20,000 ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಸಿರಿಯಾದಲ್ಲಿ 1,440ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಇನ್ನು ಕಟ್ಟಡಗಳ ನಡುವೆ ಸಿಕ್ಕ ಜನರ ಪಾಡನ್ನು ನೆನೆದರೆ ನಿಜಕ್ಕೂ ಊಹಿಸುವುದೂ ಕಷ್ಟಕರವಾಗಿದ್ದು, ಈ ಎರಡು ದೇಶಗಳ ಪರಿಸ್ಥಿತಿ ಚಿಂತಾಜನಕವಾಗಿದೆ.

- Advertisement -

Latest Posts

Don't Miss