800ಕ್ಕೂ ಹೆಚ್ಚು ಮಕ್ಕಳ ಕಿಡ್ನ್ಯಾಪ್ ಕೇಸ್: ಇದು ಬಾಲಿವುಡ್ ಸಿನಿಮಾ ಪ್ರಮೋಷನ್‌ಗಾಗಿ ಮಾಡಿರುವ ಚೀಪ್ ಗಿಮಿಕ್

Bollywood News: ಬಾಲಿವುಡ್‌ನಲ್ಲಿ ಸಿನಿಮಾ ಫೇಮಸ್ ಆಗ್ಬೇಕು, ದುಡ್ಡು ಮಾಡ್ಬೇಕು ಅಂದ್ರೆ ಯಾವ ಮಟ್ಟಕ್ಕಾದ್ರೂ ಇಳಿತಾರೆ ಅನ್ನೋದಕ್ಕೆ ಮರ್ದಾನಿ-3 ಮೂವಿ ಸಾಕ್ಷಿ.

ಈ ಮಾತು ಹೇಳ್ತಿರೋದ್ಯಾಕೆ ಅಂದ್ರೆ, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ 800ಕ್ಕೂ ಹೆಚ್ಚು ಮಕ್ಕಳನ್ನು ಕೆಲವೇ ದಿನಗಳಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ. ಕೆಲ ಹೆಂಗಸರು ಕೂಡ ಕಾಣೆಯಾಗಿದ್ದಾರೆ ಅಂತಾ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ರೀತಿಯ ರೀಲ್ಸ್‌ನದ್ದೇ ಹವಾ. ಕೆಲವರು ವಿಷಯ ತಿಳಿಯದೇ ರೀಲ್ ಮಾಡಿದ್ರೆ, ಇನ್ನು ಕೆಲವರು ಸತ್ಯ ತಿಳಿದಿದ್ದರೂ ರೀಲ್ಸ್ ಮಾಡ್ತಿದ್ರು.

ಆ ಸತ್ಯ ಏನು ಅಂದ್ರೆ, ದೆಹಲಿಯಲ್ಲಿ ಯಾವ ಮಗುವೂ ಕಾಣೆಯಾಗಿರಲಿಲ್ಲ. ಬದಲಾಗಿ ಮರ್ದಾನಿ-3 ಚಿತ್ರದ ಪ್ರಮೋಷನ್‌ಗಾಗಿ ಸಿನಿಮಾ ತಂಡ ಮಾಡಿದ್ದ ಚೀಪ್ ಗಿಮಿಕ್ ಇದಾಗಿತ್ತು. ಸುಳ್ಳು ಸುದ್ದಿ ಹಬ್ಬಿಸಿ, ಸಿನಿಮಾ ಪ್ರಮೋಟ್ ಮಾಡುವ ಕೀಳು ಮಟ್ಟದ ಕೆಲಸಕ್ಕೆ ಸಿನಿಮಾ ತಂಡ ಇಳಿದಿತ್ತು.

ಸತ್ಯ ತಿಳಿಯುತ್ತಿದ್ದಂತೆ, ಜನ ಸಿನಿಮಾ ತಂಡಕ್ಕೆ ಹಿಗ್ಗಾಮುಗ್ಗಾ ಬೈಯ್ಯಲು ಶುರು ಮಾಡಿದ್ದಾರೆ. ಅಲ್ಲದೇ, ಮರ್ದಾನಿ-3 ಸಿನಿಮಾ ಬಾಯ್‌ಕಾಟ್ ಮಾಡುವ ನಿರ್ಧಾರಕ್ಕೂ ಬಂದಿದ್ದಾರೆ. ಈ ಮುಂಚೆ ಮರ್ದಾನಿ ಭಾಗ1 ಮತ್ತು 2 ಸಿನಿಮಾ ತೆರೆಗೆ ಬಂದಿತ್ತು. ಈ ಎರಡೂ ಸಿನಿಮಾದಲ್ಲಿ ಜನ ಹೇಗೆ ಹೆಣ್ಣು ಮಕ್ಕಳನ್ನು, ಚಿಕ್ಕ ಮಕ್ಕಳನ್ನು, ಹೆಂಗಸರನ್ನು ಪುಸಲಾಯಿಸಿ, ಕಿಡ್ನ್ಯಾಪ್ ಮಾಡಿ, ಬೇಡದ ಕೆಲಸಕ್ಕೆ ಬಳಸುತ್ತಾರೆ ಅಂತಾ ತೋರಿಸಲಾಗಿತ್ತು. ಈಗ ಅದೇ ರೀತಿ ಘಟನೆಯಾಧಾರಿತ ಸಿನಿಮಾ ಆಗಿ ಮರ್ದಾನಿ-3 ಸಿನಿಮಾ ಬರುತ್ತಿದೆ. ಕಥೆ ಚೆನ್ನಾಗಿರಬಹುದು. ಆದರೆ ಈ ರೀತಿ ಗಿಮಿಕ್ ಮಾಡಿ, ಸಿನಿಮಾ ಪ್ರಮೋಟ್ ಮಾಡುವ ಅವಶ್ಯಕತೆ ಇರಲಿಲ್ಲ ಎನ್ನುತ್ತಿದ್ದಾರೆ ಜನ.

About The Author