Thursday, October 16, 2025

Latest Posts

ಮಹಾರಾಷ್ಟ್ರ ಹಾಗೂ ರಾಜಸ್ತಾನದಿಂದ ಅತೀ ಹೆಚ್ಚು ಮಾದಕ ವಸ್ತು ಹುಬ್ಬಳ್ಳಿಗೆ ಬಂದಿದೆ: ಎಸ್‌.ಶಶಿಕುಮಾರ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪೊಲೀಸ್ ಕಮಿಷನರ್ ಎಸ್‌.ಶಶಿಕುಮಾರ್, ಕಳೆದ ಏಳರಂದು ಧಾರವಾಡ ನಗರದಲ್ಲಿ ಅಪಘಾತ ಆಗಿತ್ತು. ಬುಲೆರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದ. 20 ವರ್ಷದ ಜಗದೀಶ್ ಕುಂಬಾರಗೆ ಬುಲೆರೋ ವಾಹನ ಡಿಕ್ಕಿಯಾಗಿತ್ತು. ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ ಗೆ ಪ್ರವೇಶ ಪಡೆದುಕೊಂಡಿದ್ದ.. ದುರದೃಷ್ಟವಶಾತ್ ವಿದ್ಯಾರ್ಥಿ ಸಾವನ್ನಪ್ಪಿದ್ದ. ಆಸ್ಪತ್ರೆಯಲ್ಲಿ ಜಗದೀಶ ಸಾವನ್ನಪ್ಪಿದ್ದ.

ಬುಲೆರೋ ವಾಹನ ಚಲಾಯಿಸಿದ ಮಹಾಂತೇಶ ಬಂಧನವಾಗಿದೆ. ವೇಗವಾಗಿ ಬಂದು ವಾಹನ ಡಿಕ್ಕಿಯಾಗಿತ್ತು. ಮೃತನ ತಂದೆ ತಾಯಿ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಿದ್ದಾರೆ. ಧಾರವಾಡ ಟ್ರಾಫಿಕ್ ಪೊಲೀಸರಿಂದ ಬುಲೆರೋ ವಾಹನ ಚಾಲಕ ಮಹಾಂತೇಶ ಬಂಧನವಾಗಿದೆ. ಈತ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿಯಾಗಿದ್ದು, ಹುಬ್ಬಳ್ಳಿಯ ಎಮ್ ಎಮ್ ಜೋಶಿ ಆಸ್ಪತ್ರೆಯಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದ. 105,106 ಅಡಿಯಲ್ಲಿ ಮಹಾಂತೇಶ ವಿರುದ್ದ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಇನ್ನು ಡ್ರಗ್ಸ್ ಬಗ್ಗೆ ಅಭಿಯಾನ ನಡೆಸಿರುವ ಶಶಿಕುಮಾರ್, ಈ ಬಗ್ಗೆ ಮಾತನಾಡಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ‌ ಮಾದಕ ವಸ್ತುಗಳ ಅಭಿಯಾನ ಆರಂಭ ಮಾಡಿದ್ದೇವೆ. ಈ ಹಿಂದೆ 70 ಕ್ಕೂ ಹೆಚ್ಚು ಜನರನ್ನ ಅರೆಸ್ಟ್ ಮಾಡಿದ್ದೇವೆ. 800 ಕ್ಕೂ ಹೆಚ್ಚು ಜನರಿಗೆ ಟೆಸ್ಟ್ ಮಾಡಲಾಗಿದೆ. ಮಾದಕ ವಸ್ತು ಎಲ್ಲಿಂದ ಬರತ್ತೆ ಅನ್ನೋದು ತನಿಖೆಯಾಗ್ತಿದೆ. ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ಅತೀ ಹೆಚ್ಚು ಮಾದಕ ವಸ್ತು ಹುಬ್ಬಳ್ಳಿಗೆ ಬಂದಿದೆ. ನಿನ್ನೆ ಸಿಸಿಬಿ ಅಧಿಕಾರಿಗಳು 12 ಜನರನ್ನು ಅರೆಸ್ಟ್ ಮಾಡಿದ್ದಾರೆ. ಓರಿಸ್ಸಾ ಮೂಲದ ಇಬ್ಬರು ಸೇರಿ 12 ಜನರ ವಶಕ್ಕೆ ಪಡೆದಿದ್ದಾರೆ.

ಎರಡುವರೆ ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮುಖ್ಯವಾಗಿ ಡ್ರ್ಯಾಗನ್ ಹಾಗೂ ತಲ್ವಾರ್ ಸಿಕ್ಕಿದೆ. ಒರಿಸ್ಸಾ ಮೂಲದ ಕೇಶವ ಚಂದ್ರ ಹಾಗೂ ನಿಲಾಂಬರ್ ರಾವುತ್ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾರೆ. ಪೊಲೋಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ. ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಹಾಗೂ ನಿಂಗನಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಹುಬ್ಬಳ್ಳಿಯ ಗಬ್ಬೂರ ಹೊರವಲಯದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ. ಒರಿಸ್ಸಾ ಮೂಲದ ಕೇಶವಚಂದ್ರ, ನಿಲಾಂಬರ್, ತೌಸೀಫ್, ಸಿದ್ದಾರ್ಥ, ಪವನ್, ಮಂಜುನಾಥ್, ಶಹನವಾಜ್, ನದೀಮ್, ಕಾರ್ತಿಕ, ಮೊಹಮ್ಮದೀನ್, ವಿಠ್ಠಲ್ ಹಾಗೂ ಗಣಪತಿ ಸಾ ಬಂಧನವಾಗಿದೆ.

ಬಂಧಿತರ ಬಹುತೇಕರ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಧಾರವಾಡ ನಗರದಲ್ಲಿ ನಾಲ್ಕು ಜ‌ನ ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ನಾಲ್ಕು ಜನರನ್ನು ಬಂಧಿಸಲಾಗಿದೆ. ಒಟ್ಟು ನಿನ್ನೆ 16 ಜನ ಮಾದಕ ವಸ್ತುಗಳ ಮಾರಾಟ ಮಾಡಲು ಯತ್ನಿಸಿದವರ ಬಂಧನವಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.

- Advertisement -

Latest Posts

Don't Miss