Monday, September 9, 2024

Latest Posts

ಕೇಂದ್ರ ಸರ್ಕಾರ ವಕ್ಫ ಬೋರ್ಡ್ ಕಾನೂನು ತಿದ್ದುಪಡಿಗೆ ಪ್ರಮೋದ್ ಮುತಾಲಿಕ್ ಬಹುಪರಾಕ್

- Advertisement -

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ವಕ್ಫ ಬೋರ್ಡ್ ಕಾನೂನು ತಿದ್ದುಪಡಿಗೆ ಪ್ರಮೋದ್ ಮುತಾಲಿಕ್ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿ, ವೀಡಿಯೋ ಬಿಡುಗಡೆ ಮಾಡಿರುವ ಪ್ರಮೋದ್ ಮುತಾಲಿಕ್‌,  ದೇಶದ ಸುರಕ್ಷತೆ ದೃಷ್ಠಿಯಿಂದ ಈ ನಿರ್ಧಾರ ತುಂಬಾ ಅವಶ್ಯವಾಗಿದೆ. ಮಿಲಿಟರಿ, ರೈಲ್ವೇ ಡಿಪಾರ್ಟ್ಮೆಂಟ್ ಬಿಟ್ಟರೆ ಅತೀ ಹೆಚ್ಚು ಆಸ್ತಿಯನ್ನು ವಕ್ಫ ಬೋರ್ಡ್ ಹೊಂದಿದೆ. ಮುಂದಾಗೋ ಅನಾಹುತ ತಡೆಯುವ ನಿಟ್ಟಿನಲ್ಲಿ ಈ ತಿದ್ದುಪಡಿ ಆಗಬೇಕು. ವಕ್ಫ ಬೋರ್ಡ್ ಕಾನೂನು ತಿದ್ದುಪಡಿ ಸ್ವಾಗತ್ತಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ ಸರಿಯಾಗಿದೆ. ತಿದ್ದುಪಡಿಗೆ ವಿರೋಧಿಸುವವರೆಲ್ಲರು ಮುಸ್ಲಿಂ ಓಟ್ ಬ್ಯಾಂಕ್ ಮೇಲೆ ಕನಿಟ್ಟಿರುವವರೇ. ವಿರೋಧ ಮಾಡೋ ಇಂಡಿ ಒಕ್ಕೂಟಕ್ಕೆ ದೇಶದ ಸುರಕ್ಷತೆ ಬಗ್ಗೆ ಕಾಳಜಿ ಇಲ್ಲ. ದಿ.ಮಾಜಿ ಪ್ರಧಾನಿ ನೆಹರು ಅವರು ವಕ್ಫ ಕಾನೂನನ್ನು ಮುಸ್ಲಿಂ ಪರವಾಗಿ ತಂದಿದ್ದರು. ಇಂದು ಅವರು ಅಂದು ತಂದ ವಕ್ಫ ಕಾನೂನು ದೊಡ್ಡ ಅನಾಹುತ ತರೋ ಮುನ್ಸೂಚನೆ ತಂದಿಟ್ಟಿದೆ. ಸರ್ಕಾರ ಸೇರಿ ದೇವಸ್ಥಾನ ಹಿಂದೂಗಳ ಆಸ್ತಿಯನ್ನು ಈ ವಕ್ಫ ಬೋರ್ಡ್ ಕಬಳಿಸಿಕೊಂಡೇ ಬಂದಿದೆ. ಕಾಂಗ್ರೆಸ್ ವಕ್ಫ ಬೋರ್ಡ್ ಬಂದಿದ್ದ ರವಾಗಿಯೇ ನಿಲ್ಲುವ ತೋರುತ್ತಾ ಬಂದಿದೆ. ಅದರಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಎಂದೂ ಮಾತಾಡಿಲ್ಲ. ಈಗ‌ ಪ್ರಾಧಾನಿ ಮೋದಿಯವರು ವಕ್ಫ ಬೋರ್ಡ್ ಕಾನೂನು ತಿದ್ದುಪಡಿ ಸ್ವಾಗತ ಅರ್ಹವಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

Latest Posts

Don't Miss