ತಾಯಿಯ ಪಿಂಚಣಿ ಹಣಕ್ಕಾಗಿ ಅಣ್ಣತಮ್ಮಂದಿರ ಮಧ್ಯೆ ಶುರುವಾದ ಜಗಳ, ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಮೇಳ್ಯ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಅಣ್ಣ ನರಸಿಂಹ ಮೂರ್ತಿಯನ್ನು, 39 ವರ್ಷದ ರಾಮಾಂಜಿ , ಗಂಗಾಧರಪ್ಪ ಕೊಲೆ ಮಾಡಿದ್ದಾರೆ.
ತಂದೆ ಹನುಮಂತ ರಾಯಪ್ಪ ಬೆಸ್ಕಾಂ ಉದ್ಯೋಗಿಯಾಗಿದ್ರು. ಇವರ ಮರಣದ ನಂತರ ಪತ್ನಿಗೆ ಪಿಂಚಣಿ ಬರುತ್ತಿತ್ತು. ತಾಯಿ ಬಳಿ ಪಿಂಚಣಿ ಹಣ ಹಂಚಿಕೊಳ್ಳುವ ವಿಚಾರಕ್ಕೆ ಪದೇ ಪದೇ ಜಗಳ ಆಗ್ತಿತ್ತು. ಇನ್ನು, ಮೂವರಿಗೂ ಮದುವೆಯಾಗಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಕುಡಿತಕ್ಕೆ ದಾಸರಾಗಿದ್ದ ಇವರ ವರ್ತನೆಗೆ ಬೇಸತ್ತು, ಹೆಂಡತಿ- ಮಕ್ಕಳು ಮನೆ ಬಿಟ್ಟು ಹೋಗಿದ್ರು. ಹೀಗಾಗಿ, ತಾಯಿ ಜೊತೆಯಲ್ಲಿ ಮೂವರು ವಾಸ ಮಾಡ್ತಿದ್ರು.
ಸೆಪ್ಟೆಂಬರ್ 3ರ ರಾತ್ರಿ ಪಿಂಚಣಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ರಾಮಾಂಜಿ ಮತ್ತು ಗಂಗಾಧರಪ್ಪ ಕೋಲಿನಿಂದ ಹಲ್ಲೆ ಮಾಡಿ, ಅಣ್ಣನಾದ ನರಸಿಂಹಮೂರ್ತಿಯನ್ನು ಕೊಲೆ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಮಾಡಿರೋದು ಸಾಬೀತಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಸಲಾಗ್ತಿದೆ.