Saturday, July 27, 2024

Latest Posts

ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ರಿವ್ಯೂ..

- Advertisement -

ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಬಂದಿದ್ದು, ಆ ಬಗ್ಗೆ ಇಲ್ಲಿದೆ ಚಿಕ್ಕ ರಿವ್ಯೂ..

ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಜೊತೆ ಸಿಗಲಿದೆ, ಡಾಕ್ಯುಮೆಂಟೇಶನ್, ಸಿಮ್‌ಕಾರ್ಡ್ ಟೂಲ್, ಫೋನ್ ಪ್ರೊಟೆಕ್ಷನ್‌ಗಾಗಿ ಕೇಸ್, ಯೂಎಸ್‌ಬಿ ಎಟೂಸಿ ಕೇಬಲ್, ಇಯರ್ ಫೋನ್, 18 ವ್ಯಾಟ್ಸ್ ಔಟ್‌ಪುಟ್‌ನ ಟರ್ಬೋ ಚಾರ್ಜರ್.

5ಜಿ ತಂತ್ರಜ್ಞಾನ ಹೊಂದಿರುವ ಮೊಬೈಲ್‌ಗಳಲ್ಲಿ ಇದೂ ಒಂದಾಗಿದ್ದು, ಇದು ಸಿಂಗಲ್ ನ್ಯಾನೋ ಸಿಮ್ ಹೊಂದಿದೆ. ಇನ್ನು ಇದರ ಡಿಸ್‌ಪ್ಲೇ ನೋಡೋದಾದ್ರೆ, 6.7 FHD+ display ಹೊಂದಿದೆ. ಕನೆಕ್ಟಿವಿಟಿ ಬಗ್ಗೆ ನೋಡೋದಾದ್ರೆ, ಇದರಲ್ಲಿ NFC ಇದೆ. ಬ್ಲೂಟೂತ್ 5.1 ಇದೆ. ವೈ ಫೈ 6.0 ಸಪೋರ್ಟ್ ಕೂಡ ಇದೆ. 12 ಜಿಬಿ ರ್ಯಾಮ್, 256 ಜಿಬಿ ಸ್ಟೋರೇಜ್ ಸ್ಪೇಸ್ ಹೊಂದಿದೆ.

ಇದಲ್ಲದೇ, ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಓಕ್ಟಾ ಕೋರ್ ಪ್ರೊಸೆಸ್ಸರ್ ಹೊಂದಿದ್ದು, 5000 ಎಮ್‌ಎಹೆಚ್ ಬ್ಯಾಟರಿ ಕ್ಯಾಪಾಸಿಟಿ ಹೊಂದಿದೆ. ಅಲ್ಲದೇ, 108MP ಟ್ರಿಪಲ್ ಕ್ಯಾಮೆರಾ ಸಿಸ್ಟಮ್‌ನ ಇದು ಒಳಗೊಂಡಿದ್ದು, 25 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಇನ್ನು ಇದರಲ್ಲಿ ಗ್ರ್ಯಾಮಿ ಅವಾರ್ಡ್ ವಿನ್ನರ್ ಆದ ವೇವ್ಸ್ ಆಡಿಯೋದವರ ಡ್ಯೂಯೆಲ್ ಸ್ಟಿರಿಯೋ ಸ್ಪೀಕರ್ಸ್ ಇದೆ.

ಆನ್‌ಲೈನ್ ಆ್ಯಪ್ ಆದ ಫ್ಲಿಪ್‌ಕಾರ್ಟ್‌ನಲ್ಲಿ ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಲಭ್ಯವಿದ್ದು, ಇದರ ಬೆಲೆ ನೋಡೋದಾದ್ರೆ 75ಸಾವಿರ ರೂಪಾಯಿ. ನಿಮ್ಮ ಬಳಿ ಐಸಿಐಸಿಐ ಕಾರ್ಡ್ ಇದ್ದಲ್ಲಿ ನಿಮಗೆ 7,500 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.

https://youtu.be/QJjNPyyJl-E

- Advertisement -

Latest Posts

Don't Miss