Movie News: ಕೆಲ ವರ್ಷಗಳ ಹಿಂದೆ ಮೀಟೂ ಕೇಸ್ ಸಖತ್ ಸದ್ದು ಮಾಡಿತ್ತು. ಈ ವೇಳೆ ಹಲವು ನಟಿಯರು ತಮ್ಮ ಮೇಲೆ ಯಾವ ರೀತಿ ಲೈಂಗಿಕ ಕಿರುಕುಳ ನಡೆದಿತ್ತು, ಯಾರಿಂದ ನಡೆದಿತ್ತು ಅಂತಾ ಆರೋಪಿಸಿದ್ದರು. ಕೆಲವರಿಗೆ ಶಿಕ್ಷೆಯೂ ಆಯಿತು. ಆದರೆ ಆ ವೇಳೆ ತನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು ಅಂತಾ ಆರೋಪಿಸಿದ್ದ ನಟಿ, ಇಂದು ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ತಮಿಳು ಮತ್ತು ಮಳಯಾಳಂ ಸಿನಿಮಾದಲ್ಲಿ ನಟಿಸಿರುವ ಮೀನು ಮುನೀರ್ ಎಂಬ ನಟಿಯನ್ನು, ಯುವತಿಯನ್ನು ಫೋರ್ಸ್‌ಫುಲ್ಲಿ ವೇಶ್ಯಾವಾಟಿಕೆಗೆ ತಳ್ಳಿದರೆಂದು ಆರೋಪಿಸಿ, ಬಂಧಿಸಿದ್ದಾರೆ. ತಮಿಳುನಾಡು ಪೋಲೀಸರು ಕೇರಳಕ್ಕೆ ಹೋಗಿ, ಅಲ್ಲಿ ಮೀನುಳನ್ನ ಬಂಧಿಸಿದ್ದಾರೆ.
2014ರಲ್ಲಿ ಮೀನು ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದು, ಇದೀಗ ಪ್ರಕರಣ ದಾಖಲಾಗಿದೆ. ಆದರೆ ಈ ಯುವತಿ ಬೇರೆ ಯಾರೋ ಅಲ್ಲ. ಬದಲಾಗಿ ಮೀನುಳ ಸಂಬಂಧಿಕಳೇ ಅಂತೆ. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ, ಕರೆತಂದು, ವೇಶ್ಯಾವಾಟಿಕೆ ಮಾಡಲು ಕಳುಹಿಸಿದ್ದಳೆಂದು ಯುವತಿ ಆರೋಪಿಸಿದ್ದಾಳೆ.
ಇನ್ನು ಮೀಟೂ ಆರೋಪ ಮಾಡಿದಾಗಲೂ, ಯಾವುದೇ ಸಾಕ್ಷ್ಯವಿಲ್ಲದೇ, ಮೀನು ನಟ ಬಾಲಚಂದ್ರ ಮೆನನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳು. ಆರೋಪ ಸಾಬೀತಾಗದೇ, ಕೋರ್ಟ್ ಕೇಸ್ ಕೈ ಬಿಟ್ಟಿತು. ಬಳಿಕ ನಟ ಮೆನನ್ ಮೀನು ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದರು.