Movie News: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಸುದೇವನ್ ಅವರು ತಮ್ಮ ಮೂರನೇ ಪತಿಗೂ ಡಿವೋರ್ಸ್ ನೀಡಿದ್ದಾರೆ. 2024ರಲ್ಲಿ ಇವರ ವಿವಾಹವಾಗಿದ್ದು, 1 ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ಮೀರಾ ಅವರು 2005ರಲ್ಲಿ ವಿಶಾಲ್ ಅಗರ್ವಾಲ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ 2010ರಲ್ಲಿ ಈ ಮದುವೆ ಮುರಿದು ಬಿತ್ತು. 2021ರಲ್ಲಿ ನಟ ಜಾನ್ ಕೋಕ್ಕೇನ್ ಅವರನ್ನು ವಿವಾಹವಾದರು. ಈ ವಿವಾಹದಲ್ಲಿ ಅವರಿಗೆ 1 ಗಂಡು ಮಗುವೂ ಆಗಿತ್ತು. ಆದರೆ ಆ ಮದುವೆಯೂ ಮುರಿದು ಬಿತ್ತು. 2024ರಲ್ಲಿ ಸಿನಿಮಾಟೋಗ್ರಾಫರ್ ವಿಪಿನ್ ಪುತಿಯಂಕಮ್ ಅವರ ಜತೆ ವಿವಾಹವಾಗಿದ್ದರು. 2025ಕ್ಕೆ ಅವರ ಜತೆ ಡಿವೋರ್ಸ್ ಪಡೆದು ಮೀರಾ ಸದ್ಯ ಸಿಂಗಲ್ ಆಗಿದ್ದಾರೆ.
2025ರಿಂದ ನಾನು ಸಿಂಗಲ್ ಆಗಿದ್ದೇನೆ. ಈಗ ನಾನು ಶಾಂತಿಯಿಂದ ಅದ್ಭುತ ಜೀವನ ನಡೆಸುತ್ತಿದ್ದೇನೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆಯುವ ಮೂಲಕ, ವಿಚ್ಛೇದನದ ವಿಷಯ ಬಹಿರಂಗಪಡಿಸಿದ್ದಾರೆ.

