Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ ಇದು.
ನಾಲ್ಕು ದಿನದ ರಜೆಗಾಗಿ ಆಕೆ ಎಷ್ಟು ಗೋಗರೆಯುತ್ತಾಳೆ, ಪತಿ ಅವನ ಮನೆಯವರು ಆಕೆಯನ್ನ ಯಾವ ರೀತಿಯಾಗಿ ಕೀಳು ಮಾಡುತ್ತಾರೆ..? ಜನ ಯಾವ ರೀತಿಯಾಗಿ ಆಕೆಯ olleyathanದ ಲಾಭ ಪಡೆಯುತ್ತಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ.
ಇಂದಿಗೂ ಅದೆಷ್ಟೋ ಹೆಣ್ಣು ಮಕ್ಕಳು ವಿದ್ಯಾವಂತೆಯಾಗಿದ್ದರೂ, ಉತ್ತಮ ಕೆಲಸದಲ್ಲಿದ್ದರೂ, ಸಂಭಾವಿತರಾಗಿದ್ದರೂ ಪತಿಯ ಮನೆಯಲ್ಲಿ ಆಕೆಯನ್ನು ಕೀಳಾಗಿಯೇ ಕಾಣುತ್ತಾರೆ. ಅಂಥ ಹೆಣ್ಣು ಮಕ್ಕಳು ಅನುಭವಿಸುವ ಅವಮಾನವನ್ನು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ತೋರಿಸಿದ್ದಾರೆ.
ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಬಬಿತಾಗೆ ರಜೆ ಸಿಗುವುದೇ ಕಷ್ಟದ ವಿಷಯವಾಗಿತ್ತು. ಪತಿಯ ಮನೆಗೆ ಹೋಗಲು ರಜೆ ಸಿಗದೇ, ಸಸ್ಪೆಂಡ್ ಆಗಿ ಊರಿಗೆ ಬಂದಿದ್ದ ಬಬಿತಾಗೆ ಆಕೆಯ ಬಾಲ್ಯದ ಗೆಳೆಯ ಬನ್ಸಿ ಭೇಟಿಯಾಗುತ್ತಾನೆ. ಸಂಜೆ ಭೇಟಿಯಾಗು ಏನೋ ಮಾತನಾಡಬೇಕು ಎಂದಿದ್ದ ಬನ್ಸಿ, ಸಂಜೆಯ ವೇಳೆಗೆ ಹತ್ಯೆಯಾಗಿದ್ದಾನೆಂಬ ಸುದ್ದಿ ಬರುತ್ತದೆ.
ಅದೇ ದಿನದಿಂದ ಬನ್ಸಿ ಹತ್ಯೆಯ ಇನ್ವೆಸ್ಟಿಗೇಶನ್ ಶುರು ಮಾಡ್ತಾಳೆ ಬಬಿತಾ. ಈ ಇನ್ವೆಸ್ಟಿಗೇಷನ್ ಹೇಗೆ ಸಾಗತ್ತೆ..? ಕ“ನೆಗೆ ಬನ್ಸಿ ಹತ್ಯೆಯಾಗಿದ್ದು ಹೇಗೆ ? ಅದು ಹತ್ಯೆಯಾ..? ಆತ್ಮಹತ್ಯೆಯಾ..? ಅಥವಾ ಅಚಾನಕ್ ಆಗಿ ಆದ ಸಾವಾ ಅಂತಾ ಕಂಡು ಹಿಡಿಯುತ್ತಾಳೆ. ಹೀಗೆ ಕಥೆ ಸಾಗುತ್ತದೆ.
ಬಬಿತಾ ಪಾತ್ರಕ್ಕೆ ನಿಮಿಷಾ ಸಜಾಯನ್ ಬಣ್ಣ ಹಚ್ಚಿದ್ದಾರೆ. ಅಂಬಿಕಾ ಪಂಂಡಿತ್ ಸಿನಿಮಾ ನಿರ್ದೇಶಿಸಿದ್ದು, ಅಮಿತ್ ವ್ಯಾಸ್ ಸಿನಿಮಾಗೆ ಕಥೆ ಬರೆದಿದ್ದಾರೆ. ಅಮೇಜಾನ್ ಪ್ರೈಮ್ನಲ್ಲಿ ಈ ಸಿನಿಮಾ ಲಭ್ಯವಿದೆ.




