Tuesday, April 22, 2025

Latest Posts

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆ : ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂಸದ ಎಸ್. ಮುನಿಸ್ವಾಮಿ

- Advertisement -

ಕೋಲಾರ: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಮವಾರದಿಂದ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯ ಗೊಳಿಸಿ ಆದೇಶ ಹೊರಿಡಿಸಿದೆ. ಇದರ ಬೆನ್ನಲ್ಲೇ ಸಂಸದ ಎಸ್. ಮುನಿಸ್ವಾಮಿ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಹಾಸಿಗೆ, ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೇರಿದಂತೆ ಎಲ್ಲಾ ಸಿದ್ದತೆಗಳ ಪರಿಶೀಲನೆ ನಡೆಸಿದ್ದಾರೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಜೊತೆಗೂಡಿ ಜಿಲ್ಲಾಸ್ಪತ್ರೆಯ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಮೂಗಿನ ಲಸಿಕೆ ನೀಡಲಾಗುವುದಿಲ್ಲ..!

ಕೊರೊನಾ ಪ್ರಕರಣಗಳು ಹೆಚ್ಚಾದರೆ ಚಿಕಿತ್ಸೆಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ವಹಿಸುವಂತೆ ಕೇಂದ್ರದಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಪ್ಲಾಂಟ್ ಗಳು ಸೇರಿದಂತೆ ವೆಂಟಿಲೇಟರ್ ಹಾಸಿಗೆಗಳ ಕಾರ್ಯಕ್ಷಮತೆಯ ಬಗ್ಗೆ ಪರಿಶೀಲನೆ ನಡೆಸಿದ ಸಂಸದ ಎಸ್ ಮುನಿಸ್ವಾಮಿ ಮಾದ್ಯಮಗಳ ಜೊತೆ ಮಾತನಾಡಿ ಜಿಲ್ಲೆಯ ಆರೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿದ್ದತೆಗಳ ಬಗ್ಗೆ ಮಾಹಿತಿ ಕೇಳಿದ್ದು ಅದರಂತೆ ವೈದ್ಯರು, ಮಾತ್ರೆ, ಪರಿಕರಗಳ ಕೊರತೆ ಕಂಡುಬಂದರೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಆನಿಟ್ಟಿನಲ್ಲಿ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ

ಇನ್ನು ಕೊರೊನಾ ಪ್ರಕರಣಗಳ ತಡೆಯುವ ನಿಟ್ಟಿನಲ್ಲೂ ನುರಿತ ವೈದ್ಯರ ಬಳಿ ಚರ್ಚೆ ನಡೆಸಿದ್ದು ಜಿಲ್ಲೆಗೆ ಬೇಕಾದಂತಹ ಪರಿಕರಗಳ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು , ಚೀನಾದಲ್ಲಿ ದಿನ ಒಂದಕ್ಕೆ ಮೂರುವರೆ ಕೋಟಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು ನಮ್ಮ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು , ಸಾರ್ವಜನಿಕರು ಸಹ ಮಾಸ್ಕ್ ಹಾಕಿ ಮನೆಯಿಂದ ಹೊರ ಬರಬೇಕು ಹಾಗೂ ಜಿಲ್ಲೆಯ 80 ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ ನೀಡಲಾಗುತ್ತಿದ್ದು ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಷನ್‌ ಪಡೆದುಕೊಳ್ಳುವ ಜೊತೆಗೆ ಸರ್ಕಾರ ಸೂಚಿಸುವ ಮಾರ್ಗ ಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಮೂರನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ : ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಪುರಸಭಾ ಅಧ್ಯಕ್ಷ ಕಾಡಪ್ಪ

ಮೂರನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ : ಪುರಸಭಾ ಆಡಳಿತದ ವಿರುದ್ದ ಕಾಂಗ್ರೆಸ್ ಮುಖಂಡರ ವಾಗ್ದಳಿ

- Advertisement -

Latest Posts

Don't Miss