ಕನಕದಾಸರ ಕಾರ್ಯಕ್ರಮದ ಫ್ಲೆಕ್ಸ್ ತೆರವು ಚಿಕ್ಕಬಳ್ಳಾಪುರ MLA ವಿರುದ್ಧ MP ಆಕ್ರೋಶ

Political News: ನಿನ್ನೆ ಕನಕದಾಸ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಕನಕದಾಸರ ಫ್ಲೆಕ್ಸ್ ಹಾಕಿಸಲಾಗಿತ್ತು. ಆದರೆ ಕಾರ್ಯಕ್ರಮದ ಮುಂಚೆಯೇ, ಫ್ಲೆಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಸ್ಥಳೀಯ ಸಂಸದ ಡಾ.ಸುಧಾಕರ್ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಇಲ್ಲಿನ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಹಾಕಿಸಲಾಗಿದ್ದ ಫ್ಲೆಕ್ಸ್, ಬ್ಯಾನರ್ ಗಳನ್ನ ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಕಾರ್ಯಕ್ರಮಕ್ಕೆ ಮುಂಚೆಯೇ ಏಕಾಏಕಿ ತೆರವುಗೊಳಿಸಿ, ಹರಿದು ಹಾಕಿ, ಕನಕದಾಸರಿಗೆ ಅವಮಾನ ಮಾಡಿರುವ ಘಟನೆ ಅತ್ಯಂತ ಖೇದಕರ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಡಿಸಿ, ಪೌರಾಯುಕ್ತರು, ಸಬ್ ಇನ್ಸ್ಪೆಕ್ಟರ್ ಸೇರಿ ಈ ದೌರ್ಜನ್ಯ ಎಸಗಿದ್ದು, ಚಿಕ್ಕಬಳ್ಳಾಪುರದಲ್ಲಿ ಕುರುಬ ಸಮಾಜದ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಇದೇನಾ ಕಾಂಗ್ರೆಸ್ ಪಕ್ಷ ಕನಕದಾಸರಿಗೆ ಕೊಡುವ ಗೌರವ? ಇದೇನಾ ಕಾಂಗ್ರೆಸ್ ಶಾಸಕರು ಹಿಂದುಳಿದ ಸಮುದಾಯಗಳಿಗೆ ನೀಡುವ ಮನ್ನಣೆ? ಶಾಸಕರೇ, ನನ್ನ ಮೇಲಿನ ಕೋಪಕ್ಕೆ, ನನ್ನ ವಿರುದ್ಧ ಸೇಡಿಗಾಗಿ ಕನಕದಾಸರಿಗೆ ಯಾಕೆ ಅಪಮಾನ ಮಾಡುತ್ತೀರಿ? ಕುರುಬ ಸಮಾಜದ ಭಾವನೆಗಳಿಗೆ ಯಾಕೆ ಅಗೌರವ ತೋರುತ್ತೀರಿ? ಕನಕ ಜಯಂತಿಯ ಬ್ಯಾನರ್ ತೆರವುಗೊಳಿಸಿ, ಹರಿದು ಹಾಕಿರುವ ಈ ದುಷ್ಕೃತ್ಯವನ್ನ ಕುರುಬ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ ಎಂದು ಡಾ.ಸುಧಾಕರ್ ಆಕ್ರೋಶ ಹೊರಹಾಕಿದ್ದಾರೆ.

About The Author