Thursday, May 16, 2024

Latest Posts

`ಪುನೀತ್ ರಾಜ್ ಕುಮಾರ್ ಯೋಜನೆ’ ಜಾರಿಗೊಳಿಸಿ : ಎನ್.ಆರ್.ರಮೇಶ್

- Advertisement -

ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಖ್ಯಾತ ನಟ. ಅವರು ಯಾವುದೇ ಪ್ರಚಾರದ ದೃಷ್ಟಿಯಿಲ್ಲದೆ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ಅನೇಕ ಜನರಿಗೆ ಸಹಾಯ ಮಾಡಿದ್ದರು, ಈಗಾಗಿ ಅವರ ಹೆಸರಿನಲ್ಲಿ `ಪುನೀತ್ ರಾಜ್ ಕುಮಾರ್ ಯೋಜನೆ’ ಜಾರಿಗೊಳಿಸಬೇಕು ಎಂದು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಆಧ್ಯಕ್ಷ ಎನ್.ಆರ್.ರಮೇಶ್ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ನೀಡಿದ್ದಾರೆ.

ಅಂದು ಪುನೀತ್ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಾಗ ಅವರ ಕುಟುಂಬದ ವೈದ್ಯೆರ ಸಲಹೆಯಂತೆ ಅವರನ್ನು ಸದಾಶಿವನಗರದಿಂದ ಕೇವಲ 1.5 ಕಿ,ಮೀ. ದೂರದಲ್ಲೇ ಇರುವ ವಿಕ್ರಂ ಆಸ್ಪತ್ರೆಗೆ ತಲುಪಲು ಸುಮಾರು 45 ನಿಮಿಷಗಳ ಕಾಲಾವಕಾಶ ಹಿಡಿದಿರುತ್ತದೆ.
ಆದರೆ ಅವರನ್ನು 10 ನಿಮಿಷಗಳ ಮುಂಚಿತವಾಗಿ ಆಸ್ಪತ್ರೆಗೆ ಕರೆತಂದಿದ್ದರೆ. ಪುನೀತ್ ರಾಜ್ ಕುಮಾರ ಅವರು ಜೀವಂತವಾಗಿ ಉಳಿಯುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದೆ ಕರ್ನಾಟಕ ರಾಜ್ಯದಲ್ಲಿ ಸಂಚಾರ ದಟ್ಟಣೆಯಿಂದ ಇಂತಹ ಯಾವುದೇ ದುರ್ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ108 ಆಂಬ್ಯುಲೆನ್ಸ್ ಗಳು ಮತ್ತು ಖಾಸಗಿ ಆಸ್ಪತ್ರೆಗಳ ಆಂಬ್ಯುಲೆನ್ಸ್ ಗಳಲ್ಲಿ ರೋಗಿಯ ಮನೆಯಿಂದ, ರೋಗಿಯು ತಲುಪಬೇಕಾದ ಆಸ್ಪತ್ರೆಗಳ ಮಾರ್ಗದ ಬಗ್ಗೆ ಆಯಾ ಆಂಬ್ಯುಲೆನ್ಸ್ ಗಳಲ್ಲಿನ ಎಲ್‌ಇಡಿ ಪರದೆಗಳಲ್ಲಿ ಮೂಡುವ ಹಾಗೆ ಮತ್ತು ಆಂಬ್ಯುಲೆನ್ಸ್ ಗಳ ಧ್ವನಿವರ್ಧಕಗಳಲ್ಲಿ ಅವರು ತಲುಪಬೇಕಾಗಿರುವ ಆಸ್ಪತ್ರೆಯ ಬಗ್ಗೆ ಹಾಗೂ ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸುವಂತಹ ವ್ಯವಸ್ಥೆಯನ್ನು ಮಾಡಬೇಕು.
ಆದ್ದರಿಂದ `ಪುನೀತ್ ರಾಜ್ ಕುಮಾರ್ ಯೋಜನೆ’ ಎಂದು ಹೆಸರಿಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಮಾನ್ಯ ಆರೋಗ್ಯ ಸಚಿವರನ್ನು ವಿನಂತಿಸಿಕೊಳ್ಳುತ್ತೆವೆoದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ಅವರು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಿದ್ದಾರೆ.

- Advertisement -

Latest Posts

Don't Miss