ಮಂಬೈನ ಕಾಲೇಜು ಆವರಣದಲ್ಲಿ ಹಿಜಾಬ್, ನಖಾಬ್, ಬುರ್ಖಾ, ಕ್ಯಾಪ್ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಶ್ನಿಸಿ ಮಹಿಳಾ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಮುಂಬೈ ನಗರದ ಕಾಲೇಜೊಂದು ತೆಗೆದುಕೊಂಡ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಎಎಸ್‍ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರ ವಿಭಾಗೀಯ ಪೀಠವು ಕಾಲೇಜು ಅಧಿಕಾರಗಳ ನಿರ್ಧಾರವನ್ನು ಪ್ರಶ್ನಿಸಿ ಒಂಬತ್ತು ವಿಧ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೋಳಿಸಿದೆ. ಜುಲೈನಲ್ಲಿ , ವಿಜ್ಞಾನ ಪದವಿ ಕೋರ್ಸ್‍ನ ಎರಡನೇ ಮತ್ತು ಮೂರನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‍ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜು ಹೋರಡಿಸಿದ ನಿರ್ದೇಶನದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕಾಲೇಜು ಆವರಣದೊಳಗೆ ವಿದ್ಯಾರ್ಥಿಗಳು ಹಿಜಾಬ್, ನಿಖಾಬ್, ಬುರ್ಖಾ ಧರಿಸದಂತೆ ಡ್ರೆಸ್ ಕೋಡ್ ಹೇರಿದ್ದರು.
ಅರ್ಜಿ ಸಲ್ಲಿಕೆ ಮಾಡಿದ ವಿದ್ಯಾರ್ಥಿಗಳ ಪ್ರಕಾರ ಇಂಥ ಆದೇಶವನ್ನು ತಮ್ಮ ಧರ್ಮವನ್ನು ಆಚರಿಸುವ ಮೂಲಭೂತ ಹಕ್ಕುಗಳು, ಖಾಸಗಿತನದ ಹಕ್ಕು ಮತ್ತು ಆಯ್ಕೆಯ ಹಕ್ಕಿನ ವಿರುದ್ಧವಾಗಿದೆ ಎಂದಿದ್ದಾರೆ. ಅರ್ಜಿಯು ಕಾಲೇಜಿನ ಕ್ರಮವನ್ನು “ನಿರಂಕುಶ, ವಿವೇಚನಾರಹಿತ, ಕೆಟ್ಟ ಮತ್ತು ವಿಕೃತ” ಎಂದು ಬಣ್ಣಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಅಲ್ತಾಫ್ ಖಾನ್, ಜೂನಿಯರ್ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ಈ ಪ್ರಕರಣವನ್ನು ಪ್ರತ್ಯೇಕ ಮಾಡಿದರು. ಈ ಪ್ರಕರಣವು ಡ್ರೆಸ್ ಕೋಡ್ ಹೊಂದಿರುವ ಆದರೆ ಸಮವಸ್ತ್ರವನ್ನು ಹೊಂದಿರುವ ಹಿರಿಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ. ಯಾವುದೇ ಕಾನೂನು ಅಧಿಕಾರವಿಲ್ಲದೆ ವಾಟ್ಸಾಪ್ ಮೂಲಕ ಡ್ರೆಸ್ ಕೋಡ್ ಅನ್ನು ಹೇರಲಾಗಿದೆ ಎಂದು ಖಾನ್ ವಾದಿಸಿದರು. ಇದು ಮೊದಲೇ ಅಸ್ತಿತ್ವದಲ್ಲಿರುವ ಏಕರೂಪ ನೀತಿಯನ್ನು ಜಾರಿಗೊಳಿಸಿದ ಕರ್ನಾಟಕ ಪ್ರಕರಣಕ್ಕೆ ವ್ಯತಿರಿಕ್ತವಾಗಿದೆ. ಡ್ರೆಸ್ ಕೋಡ್ ಅರ್ಜಿದಾರರ ಆಯ್ಕೆಯ ಹಕ್ಕು, ದೈಹಿಕ ಸಮಗ್ರತೆ ಮತ್ತು ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದ್ದಾರೆ.